ಹಳೆಗೇಟು- ಬೆಟ್ಟಂಪಾಡಿ ಕೊರಗಜ್ಜ ದೈವದ ನೇಮೋತ್ಸವ -ಭಕ್ತರಿಂದ ಹರಕೆಯ ಹೂ ಮಾಲೆ ಸಮರ್ಪಣೆ

0

ಹಳೆಗೇಟು- ಬೆಟ್ಟಂಪಾಡಿ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜ ದೈವಸ್ಥಾನದ ಸಮಿತಿ ಹಾಗೂ ನೇಮೋತ್ಸವ ಸಮಿತಿಯ ವತಿಯಿಂದ ವರ್ಷಂಪ್ರತಿ ‌ನಡೆಸಲ್ಪಡುವ 3 ನೇ ವರ್ಷದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು
ಮಾ.19 ರಂದು ಜರುಗಿತು.

ಸಂಜೆ ಸ್ಥಳೀಯ ಬೆಟ್ಟಂಪಾಡಿ ಪರಿಸರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು. ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮವಾಗಿ ನಂತರ ಶ್ರೀ ದೈವದ ಭಂಡಾರ ತೆಗೆಯಲಾಯಿತು.
ರಾತ್ರಿ ಕಲಾವಿದ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ಎಂಬ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ನಡೆಯಿತು. ಭಕ್ತರಿಂದ ದೈವಕ್ಕೆ ಹೂಮಾಲೆಯನ್ನು ಸಮರ್ಪಿಸಲಾಯಿತು.
ರಾತ್ರಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ‌
ಅನ್ನ ಸಂತರ್ಪಣೆ ಯಾಯಿತು. ಊರಿನ ಮತ್ತು ‌ಪರ ಊರಿನ ಭಕ್ತಾದಿಗಳು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.