ಸುಳ್ಯ ವಿಧಾನ ಸಭಾ ಕ್ಷೇತ್ರದ ಎನ್.ಎಸ್.ಯು.ಐ. ಅಧ್ಯಕ್ಷರಾಗಿ ಧನುಷ್ ಕುಕ್ಕೆಟ್ಟಿ

0

ಸುಳ್ಯ ವಿಧಾನ ಸಭಾ ಕ್ಷೇತ್ರದ ಎನ್ ಎಸ್ ಯು ಐ ಅಧ್ಯಕ್ಷರಾಗಿ ಧನುಷ್ ಕುಕ್ಕೆಟ್ಟಿ ಯವರನ್ನು ರಾಜ್ಯ ಸಮಿತಿಯಿಂದ ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಇವರು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿ ಕೆಲಸ ಮಾಡಿದ್ದಾರೆ.

ಎನ್.ಎಸ್.ಯು.ಐ. ಜಿಲ್ಲಾ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ರವರ ಶಿಫಾರಸುಗಳ ಮೇಲೆ ಜಿಲ್ಲಾ ಅಧ್ಯಕ್ಷರಾದ ಸುಹಾನ್ ಆಳ್ವ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಆದೇಶದಂತೆ ಆಯ್ಕೆಮಾಡಲಾಗಿದೆ.

ಗ್ರಾಫಿಕ್ ಡಿಸೈನರ್ ಆಗಿರುವ ಧನುಷ್ ಕುಕ್ಕೇಟಿ ಮಂಡೆಕೋಲು ಗ್ರಾಮದ ಪೇರಾಲು ಬಾಲಚಂದ್ರ ಕುಕ್ಕೇಟಿ ಹಾಗೂ ಶ್ರೀಮತಿ ಜಲಜಾಕ್ಷಿ ದಂಪತಿಗಳ ಪುತ್ರ.