ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆ

0

ಅರಂತೋಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

ಅರಂತೋಡಿನ ಕಲ್ಲುಗದ್ದೆ ನಿವಾಸಿ ಮಣಿಕಂಠ ಹಾಗೂ ಶ್ರೀಮತಿ ಜಯಂತಿ ದಂಪತಿಯ ಪುತ್ರಿ ಜಾನ್ವಿ ಕೆ.ಎಂ. ಹಾಗೂ ಅರಂತೋಡು ಗ್ರಾಮದ ಕೊಡೆಂಕಿರಿ ಪ್ರಶಾಂತ್ -ಸುಮಲತಾ ಅವರ ಪುತ್ರಿ ತ್ರಿಶಾಲಿ ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.