ನವೋದಯ ಪ್ರವೇಶ ಪರೀಕ್ಷೆ : ಪ್ರತಿಭಾ ವಿದ್ಯಾಲಯದ 16 ವಿದ್ಯಾರ್ಥಿಗಳು ಆಯ್ಕೆ

0

ಜನವರಿ ತಿಂಗಳಿನಲ್ಲಿ ನಡೆದ ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಈ ಬಾರಿ ಸುಳ್ಯದ ಪ್ರತಿಭಾ ವಿದ್ಯಾಲಯದಿಂದ 16 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆಯ ಶ್ರೇಯಾಂಕ ಕೋಲ್ಚಾರ್, ಪೂರ್ವಿ ಎ. ಮತ್ತು ಮಿಥಾಲಿ ಕೊಯ್‌ನಾಡು, ವಿನೋಬ ನಗರ ವಿವೇಕಾನಂದ ಹಿ. ಪ್ರಾ. ಶಾಲೆಯ ಚಿರಾಯು ಜೆ. ಎಮ್. ಮತ್ತು ಆದಿತ್ಯ ಆರ್. ಗೌಡ, ಬಂದ್ಯಡ್ಕ ಸ.ಹಿ.ಪ್ರಾ. ಶಾಲೆಯ ದೀಪಾ ಎಮ್. ಪಿ. ಮತ್ತು ವರ್ಷಿಣಿ ಪಿ. ಎಮ್. ಮಿತ್ತಡ್ಕ ಮರ್ಕಂಜ ಸ.ಹಿ.ಪ್ರಾ. ಶಾಲೆಯ ಸನತ್ ಎಸ್., ಸುಬ್ರಹ್ಮಣ್ಯ ಕುಮಾರಸ್ವಾಮಿ ಹಿ.ಪ್ರಾ. ಶಾಲೆಯ ವಿಹಾನ್ ಎ.ಎಮ್., ಲಿಪಿ ಮುಂಡೋಡಿ ಮತ್ತು ಜನನಿ ಎನ್.ಜೆ., ಕಡಬ ಸೈಂಟ್ ಜೋಕಿಮ್ಸ್ ಹಿ. ಪ್ರಾ. ಶಾಲೆಯ ದಿಶನ್ ಆರ್.ವಿ., ಆಲಂಕಾರು ಸ.ಹಿ.ಪ್ರಾ. ಶಾಲೆಯ ಸುಶಾಂತ್ ಜಿ., ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಹಾರ್ದಿಕ್ ರೈ ಎಚ್. ಮತ್ತು ಲಿತೀಕ್ಷಾ ಎನ್. ಜೆ. ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.