ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭಮ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಎ.1ರಿಂದ ಎ.29ರವರೆಗೆ ವಿವಿಧ ‌ಧಾರ್ಮಿಕ ಹಾಗೂ ದೈವಗಳಿಗೆ ನೇಮೋತ್ಸವದೊಂದಿಗೆ ನಡೆಯಲಿದ್ದು, ಇಂದು ಶಿರಾಡಿ ಯಾನೆ ರಾಜಂ ದೈವದ ಭಂಡಾರ ಬರುವುದು, ಉಗ್ರಾಣ ತುಂಬಿಸಿ ನಂತರ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ದೇವಾಲದ ತಂತ್ರಿಗಳಾದ ಆರೋತ್ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕಾವೂರು ಜಾತ್ರೋತ್ಸವಕ್ಕೆ ಮುಂಡೋಡಿ ಮಾಳಿಗೆಯಿಂದ ಶಿರಾಡಿ ದೈವದ ಭಂಡಾರ ಬಂದು ಬಳಿಕ ಧ್ವಜಾರೋಹಣವಾಗಿ ಜಾತ್ರೋತ್ಸವ ಮುಗಿದು ಧ್ವಜಾರೋಹಣವಾಗಿ ಭಂಡಾರ ತೆರಳುವುದು ವಾಡಿಕೆ. ಅದರಂತೆ ಇಂದು ಬೆಳ್ಳಂಬೆಳಗ್ಗೆ ಶಿರಾಡಿ ದೈವದ ಭಂಡಾರ ದೇವಸ್ಥಾನಕ್ಕೆ ತರಲಾಯಿತು.

ಬಳಿಕ ಗಣಹೋಮ, ಉಗ್ರಾಣ ತುಂಬಿಸುವುಸುದು, ಧ್ವಜಾರೋಹಣ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಎ ಕಂಜಿಪಿಲಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಹಲ್ದಡ್ಕ, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಕಂಜಿಪಿಲಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಹಾಗೂ ದೇವಾಲಯದ ಧನಂಜಯ ಬಲ್ಕಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಕಮಾಲಕ್ಷ ಗೌಡ ಪುರ, ಧರ್ಮಪಾಲ ಸುಳ್ಳಿ, ಚೆನ್ನಕೇಶವ ದೋಳ ಹಾಗೂ ಮಿನುಂಗೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ಬೈಲುವಾರು ಮುಖ್ಯಸ್ಥರುಗಳು, ದೇವಾಲಯಕ್ಕೆ ಸಂಬಂಧಪಟ್ಟ ವಿವಿಧ ಚಾಕರಿಯವರು ಉಪಸ್ಥಿತರಿದ್ದರು.

ಎ.8ರಂದು ತೋಟಚಾವಡಿಯಲ್ಲಿ ದೇವರಿಗೆ ಬಲ್ಲಾಳರ ಕಾಣಿಕೆ, ಉಳ್ಳಾಕುಳ ದರ್ಶನ, ರಾತ್ರಿ ಉತ್ಸವ ಬಲಿ ಪ್ರಾರಂಭ, ಭಜನಾ ಕಾರ್ಯಕ್ರಮ, ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.