ವಿಧಾನ ಪರಿಷತ್ ಚುನಾವಣೆ : ಎನ್.ಡಿ.ಎ. ಅಭ್ಯರ್ಥಿಯಾಗಿ ಎಸ್.ಎಲ್. ಭೋಜೇಗೌಡ ನಾಮಪತ್ರ ಸಲ್ಲಿಕೆ

0

ಜೂನ್ 3ರಂದು ನಡೆಯುವ ವಿಧಾನ ಪರಿಷತ್ ನ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಎನ್.ಡಿ.ಎ. ಅಭ್ಯರ್ಥಿ ಯಾಗಿ ಎಸ್.ಎಲ್.ಭೋಜೇಗೌಡ ರು ಮೈಸೂರಿನ ವಿಭಾಗೀಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುಳ್ಯದಿಂದ ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಸುಳ್ಯ ತಾಲೂಕು ಜನತಾದಳ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಉಮೇಶ್ ಗೌಡ ಮತ್ತಿತರರಿದ್ದರು.