ಸಂಪಾಜೆಯಲ್ಲಿ ಕಾರು ಮತ್ತು ಪಿಕಪ್ ಮಧ್ಯೆ ಅಪಘಾತ, ಕಾರಿನ ಮುಂಭಾಗ ಜಖಂ

0

ಕಾರು ಮತ್ತೆ ಪಿಕಪ್ ಮಧ್ಯೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಕಾರಿನ ಮುಂಭಾಗ ಜಖಂಗೊಂಡ ಘಟನೆ
ಸಂಪಾಜೆ ಗ್ರಾಮದ ಅರೆಕಲ್ಲು ಬಳಿ ಇಂದು ಸಂಭವಿಸಿದೆ.

ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಹಾಗೂ ಸಂಪಾಜೆಯ ಅರೆಕಲ್ಲು ಬಳಿಯಿಂದ ರಬ್ಬರ್ ಹಾಲು ತೆಗೆದುಕೊಂಡು ಬರುತ್ತಿದ್ದ ಪಿಕಪ್ ಸಂಪಾಜೆ ಅರೆಕಲ್ಲು ರೋಡಿನ ತಿರುವಿನಲ್ಲಿ ಡಿಕ್ಕಿ ಹೊಡೆಯಿತು. ಕಾರಿನೊಳಗಿದ್ದವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.