ನೆಟ್ಟಾರಿನಲ್ಲಿ ಚರಂಡಿಗೆ ಬಿದ್ದ ಜೀಪ್ : ಚಾಲಕನಿಗೆ ಗಾಯ

0

ಬೆಳ್ಳಾರೆ ಸಮೀಪ ನೆಟ್ಟಾರಿನಲ್ಲಿ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಮೇ.14 ರಂದು ರಾತ್ರಿ ನಡೆದಿದೆ.


ಬೆಳ್ಳಾರೆ ಕಡೆಯಿಂದ ಮಾಡಾವು ಕಡೆಗೆ ವಿನೋದ್ ಪಾಲ್ತಾಡು ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಥಾರ್ ಜೀಪು ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಚಾಲಕನಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.


ಜೀಪಿನ ಎದುರುಭಾಗ ಸಂಪೂರ್ಣ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.