ಪೈಚಾರು: ಹೆದ್ದಾರಿ ಸೇತುವೆ ಕಾಮಗಾರಿಗೆ ರಸ್ತೆ ಬದಿಯ ಅಂಗಡಿಗಳ ತೆರವಿಗೆ ಇಲಾಖಾಧಿಕಾರಿಗಳಿಂದ ಸೂಚನೆ

0

ಮಾಣಿ ಮೈಸೂರು ಹೆದ್ದಾರಿ ಚತುಸ್ಪಥ ಗೊಳ್ಳುವ ಹಿನ್ನೆಲೆಯಲ್ಲಿ ಸುಳ್ಯದ ಪೈಚಾರಿನಲ್ಲಿ ಕಾಮಗಾರಿ ಹಂತದಲ್ಲಿರುವ ಸೇತುವೆಯ ಬಳಿಯ ಅಂಗಡಿ ಮತ್ತು ಮನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ತಂಡ ಮೇ .15ರಂದು ಭೇಟಿ ನೀಡಿ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಜಾಗವನ್ನು ತೆರವುಗೊಳಿಸುವಂತೆ ಮನವಿ ಮಾಡಿ ಸೂಚನೆ ನೀಡಿದ್ದಾರೆ.

ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ 4 ಸೇತುವೆಗಳ ಅಗಲೀಕರಣ ಗೊಳ್ಳುತ್ತಿದ್ದು, ಈಗಾಗಲೇ ಮೂರು ಸೇತುವೆಗಳು ಕಾಮಗಾರಿ ಪೂರ್ಣಗೊಂಡಿದೆ.


ಪೈಚಾರಿ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಅಗಲೀಕರಣಕ್ಕೆ ಸ್ಥಳೀಯ ಅಂಗಡಿ ಮುಂಗಟುಗಳು ಮತ್ತು ಕೆಲವು ಮನೆಗಳ ಕಾಂಪೌಂಡ್ ಗೋಡೆಗಳ ತೆರವು ಕಾರ್ಯ ನಡೆಸುವ ಇಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಂಗಡಿ ಮತ್ತು ಮನೆಗಳ ಮಾಲಕರಿಗೆ ಮಾಹಿತಿಯನ್ನು ನೀಡಿ ತೆರವುಗೊಳಿಸಬೇಕಾದ ಪ್ರದೇಶದ ಬಗ್ಗೆ ಗುರುತುಗಳನ್ನು ಮಾಡಿ ಮಾಹಿತಿಯನ್ನು ನೀಡಿರುತ್ತಾರೆ.


ಪೈಚಾರು ಬದ್ರಿಯಾ ಮಸೀದಿ ಮುಂಭಾಗದಿಂದ ಕುಂಞಿ ಪಳ್ಳಿ ವಕೀಲರ ಮನೆಯ ತನಕ ಸುಮಾರು 300 ಮೀಟರ್ ಉದ್ದ ಮತ್ತು ರಸ್ತೆಗೆ 3 ಡಿವೈಡರ್ನಿಂದ 9.8 ಮೀಟರ್ ಅಗಲದಲ್ಲಿ ವಿಸ್ತೀರ್ಣಗೊಳ್ಳಲಿದ್ದು,ಸ್ಥಳ ಗುರುತು ಮಾಡಿ ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಲು ಮಾಹಿತಿಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಇಲಾಖೆಯ ಭೂ ಸ್ವಾಧೀನಾಧಿಕಾರಿ ಮಾಣಿಕ್ಯ, ಎ. ಡಬ್ಲ್ಯೂ .ಇ ಶಿವಪ್ರಸಾದ್, ಎ ಇ ಕೀರ್ತಿ, ಎ ಇ ಇ ನಾಗರಾಜ್, ಗುತ್ತಿಗೆದಾರ ಮಂಗಳೂರು ಮುಗ್ರೋಡಿ ಸುಧಾಕರ ಶೆಟ್ಟಿ, ಸುಳ್ಯ ಕಂದಾಯ ನಿರೀಕ್ಷಣಾಧಿಕಾರಿ ಅವಿನ್ ರಂಗತಮಲೆ ಮೊದಲಾದವರು ಉಪಸ್ಥಿತರಿದ್ದರು.