ಸುಳ್ಯ ನಗರದ ಚರಂಡಿ ನಿರ್ವಹಣೆಗೆ ತುರ್ತು ಕ್ರಮಕೈಗೊಳ್ಳಲು ನ.ಪಂ.ಸದಸ್ಯರ ಮನವಿ

0

ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ನಗರದ ಚರಂಡಿಗಳ ನಿರ್ವಹಣೆ ಹಾಗೂ ಕಾಡು ಕಡಿಯುವ ಟೆಂಡರ್ ಕರೆಯಲು ಅಸಾಧ್ಯವಾಗಿರುವ ಕಾರಣದಿಂದ ನಗರದಲ್ಲಿ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ವಿಶೇಷ ಅನುಮತಿ ಪಡೆದು ನಗರದ ಮಳೆ ನೀರು ಚರಂಡಿಗಳ ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಹಾಗೂ ನಗರ ಪಂಚಾಯತ್ ಆಡಳಿತಾಧಿಕಾರಿಗಳಿಗೆ ನಗರ ಪಂಚಾಯತ ಬಿಜೆಪಿ ಸದಸ್ಯರುಗಳ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ನಗರ ಪಂಚಾಯತಿ ಮುಖ್ಯ ಅಧಿಕಾರಿ ಬಿ ಎಂ ಡಾಂಗೆ ಅವರು ಉಪಸ್ಥಿತರಿದ್ದರು. ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರ ನೇತೃತ್ವದಲ್ಲಿ ಸದಸ್ಯರುಗಳಾದ ಬುದ್ಧನಾಯ್ಕ್ ಕಿಶೋರಿ ಶೇಟ್ ಹಾಗೂ ಶೀಲಾವತಿಯವರು ಉಪಸ್ಥಿತರಿದ್ದರು