ಕೂತ್ಕುಂಜದಲ್ಲಿ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿ: ಶಾಸಕರ ಭೇಟಿ

0

ಭಾರಿ ಗಾಳಿ ಮಳೆಗೆ ಮೇ.15 ರಂದು ಸಂಜೆ ಕೂತ್ಕುಂಜ ಗ್ರಾಮದ ಹೆಬ್ಬಾರುಹಿತ್ಲು ಚನಿಯ ಎಂಬವರ ಮನೆ ಮೇಲೆ ಭಾರಿ ಗಾತ್ರದ ಮರ ಬಿದ್ದು ಮನೆ ಸಂಪೂರ್ಣ ಮುರಿದು ಬಿದ್ದಿದೆ.

ಮೇ.16 ರಂದು ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ವಸಂತ ನಡುಬೈಲು,ಧರ್ಮಪಾಲ ಗೌಡ ಕಕ್ಯಾನ, ಮೊದಲಾದವರು ಉಪಸ್ಥಿತರಿದ್ದರು.