ಪೋಕ್ಸೋ ಪ್ರಕರಣದ ಆರೋಪಿಗೆ ಷರತ್ತು ಬದ್ಧ ಜಾಮೀನು

0

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ವಿಧಿಸಲಾದ ಪೋಕ್ಸೋ ಪ್ರಕರಣದ ಆರೋಪಿ ಕಾಣಿಯೂರು ಸಮೀಪದ ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯ ಅವರಿಗೆ ಷರತ್ತು ಬದ್ದ ಜಾಮೀನು ದೊರೆತಿದೆ‌.


ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೋಲೀಸರು ಆರೋಪಿಯನ್ನು ಸೆ.19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.
ಪ್ರಕರಣದ ಆರೋಪಿಯಾಗಿರುವ ಪ್ರಸಾದ್‌ ಪಾಂಗಣ್ಣಾಯ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಘೋಷಣೆ ಮಾಡಿದೆ. ಆರೋಪಿಯ ಪರವಾಗಿ ಪುತ್ತೂರಿನ ಖ್ಯಾತ ವಕೀಲ ನರಸಿಂಹ ಪ್ರಸಾದ್‌ ಬಿ. ವಾದಿಸಿದ್ದಾರೆ.