ಇಂದೂ ಸುಳ್ಯದಲ್ಲಿ ಉತ್ತಮ ಮಳೆ : ಧರೆಗೆ ತಂಪೆರದ ಮಳೆರಾಯ

0

ಸುಳ್ಯ ಹಾಗೂ ಸುತ್ತಮುತ್ತಲಿನ ಭಾಗಕ್ಕೆ ಕಳೆದ ಒಂದು ಗಂಟೆಯಿಂದ ಉತ್ತಮ ಮಳೆಯಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಕೆಂಡದಂತೆ ಆಗಿದ್ದ ಧರೆಗೆ ವರುಣರಾಯ ತಂಪೆರಿದಿದ್ದಾನೆ.


ಕಳೆದ ಎರಡು ದಿನಗಳಿಂದ ಮಳೆ ಆಗುತ್ತಿದ್ದರೂ ಇಂದು ಸುರಿದ ಮಳೆ ಬತ್ತಿ ಹೋಗುತ್ತಿರುವ ಪಯಶ್ವಿನಿ ನದಿಯಲ್ಲಿ ನೀರು ಹರಿಯುವಂತೆ ಮಾಡಿದೆ. ಇದರಿಂದ ಸುಳ್ಯದ ಜನತೆಗೂ, ಜಲಚರಗಳಿಗೂ ನೆಮ್ಮದಿ ದೊರಕಿದಂತಾಗಿದೆ.