ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ

0

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ನಡೆದ ಜಾತ್ರೋತ್ಸವ


ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಮೇ.೧೮ ಮತ್ತು ೧೯ರಂದು ವೆ.ಮೂ.ನೀಲೇಶ್ವರ ಕೆ.ಯು.ದಾಮೋದರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.


ಮೇ. ೧೮ ರಂದು ಸಂಜೆ ತಂತ್ರಿಗಳ ಆಗಮನದ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ದಿ, ಪ್ರಾಸಾದ ಶುದ್ದಿ, ರಕ್ಟೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂರ್ಪಣೆ, ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ
ಮೇ.೧೮ ರಂದು ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ಹೇಮ ಸ್ವಾತಿ ಕುರಿಯಾಜೆ ಇವರಿಂದ ಯಕ್ಷಗಾಯನ ನಡೆಯಿತು. ನಂತರ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಲೇ ಬುಡಿಯೆರ್‌ಗೆ ತುಳು ಹಾಸ್ಯಮಯ ನಾಟಕ ನಡೆಯಿತು.


ಮೇ.೧೯ ಬೆಳಿಗ್ಗೆ ಗಣಪತಿ ಹವನ ನಡೆದು ಬಿಂಬ ಶುದ್ದಿ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಬಲಿ ಹೊರಡುವುದು ನಡೆಯಿತು. ನಂತರ ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ, ಮಂಗಳಾರತಿ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಿತು.


ಮೇ.೨೧ ರಂದು ನರಸಿಂಹ ಜಯಂತಿ ಪ್ರಯುಕ್ತ ಮದ್ಯಾಹ್ನ ವಿಶೇಷ ಪೂಜೆ ರಾತ್ರಿ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.


ಶಿಲಾ ದೀಪಸ್ಥಂಭ ಕೊಡುಗೆ


ದೇವಳದ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ ದೇವಸ್ಯ ಮತ್ತು ಕೇಶವ ಭಟ್ ಮಾನಸವನ ಪೊಳೆಂಜ ಅಲೆಕ್ಕಾಡಿ ಯವರು ಸುಮಾರು 75 ಸಾವಿರ ಮೌಲ್ಯದ ಶಿಲಾ ದೀಪ ಸ್ಥಂಭವನ್ನು ಜಾತ್ರೋತ್ಸವದ ಸಂದರ್ಭದಲ್ಲಿ ದೇವಳಕ್ಕೆ ಕೊಡುಗೆಯಾಗಿ ನೀಡಿದರು. ದೇವಳದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ವೈದಿಕ ಕಾರ್ಯ ನಡೆಸಿದರು.
ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.