ಗೂನಡ್ಕ: ದೊಡ್ಡಡ್ಕ ರಾಜಾರಾಂಪುರದಲ್ಲಿ ಪ್ರತಿಷ್ಠಾ ದಿನ ಹಾಗೂ ಹರಕೆಯ ಸ್ವಾಮಿ ಕೊರಗಜ್ಜ ದೈವದ ಕೋಲ

0

ದ.ಕ. ಸಂಪಾಜೆ ಗ್ರಾಮದ ಗೂನಡ್ಕದ ದೊಡ್ಡಡ್ಕ ರಾಜಾರಾಂಪುರದ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಪ್ರತಿಷ್ಠಾ ದಿನ ಕಾರ್ಯಕ್ರಮ ಮತ್ತು ಹರಕೆಯ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಮೇ.21ರಂದು ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ಹರಕೆಯ ಹದಿನಾರು ಸ್ವಾಮಿ ಕೊರಗಜ್ಜ ದೈವದ ನರ್ತನ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ
ಆಡಳಿತ ಮೊಕ್ತೇಸರ ಬಿ.ಕೆ. ಚಂದ್ರಶೇಖರ ಬೆಳ್ಚಪ್ಪಾಡ, ಸಮಿತಿಯ ಅಧ್ಯಕ್ಷರು , ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.