ಸುಳ್ಯ : ಆಟೋರಿಕ್ಷಾದ ಹಿಂಬದಿಗೆ ಗುದ್ದಿದ ಕಾರು

0

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದ ಹಿಂಬದಿಗೆ ಅದೇ ರಸ್ತೆಯ ಮೂಲಕ ಬಂದ ಕಾರೊಂದು ಗುದ್ದಿದ ಘಟನೆ ಮೇ 28 ರಂದು ಮಧ್ಯಾಹ್ನ ಸಂಭವಿಸಿದೆ.


ಕಲ್ಲುಮುಟ್ಲು ನಿವಾಸಿ ಅಬೂಬಕ್ಕರ್ ಎಂಬುವರು ಶ್ರೀರಾಮ್ ಪೇಟೆ ಕಡೆಯಿಂದ ಚಲಾಯಿಸಿ ಕೊಂಡು ಬರುತ್ತಿದ್ದ ಆಟೋರಿಕ್ಷಾ ಖಾಸಗಿ ಬಸ್ಸು ನಿಲ್ದಾಣದ ಬಳಿ ಇರುವ ಆಟೋ ಪಾರ್ಕಿಂಗಿನತ್ತ ತಿರುಗುವ ಸಂದರ್ಭ ಇದೇ ಮಾರ್ಗವಾಗಿ ಹಿಂದಿನಿಂದ ಬರುತ್ತಿದ್ದ ಪೈಚಾರು ಮೂಲದವರ ಕಾರು ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಕಾರಿನ ಮುಂಭಾಗ ಮತ್ತು ಆಟೋರಿಕ್ಷದ ಹಿಂಬದಿ ಜಖಂ ಗೊಂಡಿದ್ದು, ಚಾಲಕರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದಿದೆ.