ಕಣಕ್ಕೂರು ತರವಾಡು ಮನೆಸ್ಥಾನದ ಶ್ರೀ ದೈವದೇವರುಗಳ ಧರ್ಮನಡಾವಳಿಯು ಡಿ. ರಿಂದ ಡಿ. ೯ರವರೆಗೆ ನಡೆಯಿತು. ನ. ೧೧ರಂದು ಗೊನೆ ಕಡಿದು, ಡಿ. ೪ರಂದು ಶ್ರೀ ವೆಂಕಟರಮಣ ದೇವರ ಹರಿಸೇವೆ, ಡಿ. ೬ರಂದು ಸಂಜೆ ದೀಪಾರಾಧನೆ, ರಾತ್ರಿ ಶ್ರೀ ರಾಜ್ಯದೈವದ ಭಂಡಾರತೆಗೆಯುವುದು, ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ತೊಡಂಙಳ್, ಶ್ರೀ ಕಾರ್ಣವರ್ ದೈವ, ಅನ್ನಸಂತರ್ಪಣೆ, ಪೊಟ್ಟನ್ ದೈವದ ಅಗ್ನಿಸೇವೆ, ಪ್ರಸಾದ ವಿತರಣೆ ನಡೆಯಿತು.





ಡಿ. ೭ರಂದು ಶ್ರೀ ಉಳ್ಳಾಕುಲು ಮತ್ತು ಮಲೆದೈವಗಳ ನೇಮ, ಶ್ರೀ ಎರಿಞಿಪುಯ ಚಾಮುಂಡಿ ದೈವದ ಕೋಲ, ಶ್ರೀ ರಕ್ತೇಶ್ವರಿ ದೈವದ ಕೋಲ, ಮಧ್ಯಾಹ್ನ ಅನ್ನಸಂತರ್ಪಣೆ, ನಂತರ ಶ್ರೀ ರಆಜ್ಯದೈವ ನೇಮ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕಳಿಯಾಟ, ಪ್ರಸಾದ ವಿತರಣೆ, ಸಂಜೆ ಭಜನಾ ಸೇವೆ, ನೃತ್ಯ ಭಜನೆ, ಕೂಜಿ ದೈವಗಳ ಮಡ್ತನ ಕೊಡಿಯಡಿಯಿಂದ ಭಂಡಾರ ತೆಗೆದು ಮೂಲಸ್ಥಾನಕ್ಕೆ ಸೇರಿಸುವುದು, ಅನ್ನಸಂತರ್ಪಣೆ ನಡೆಯಿತು.
ಡಿ. ೮ರಂದು ರಾತ್ರಿ ಮನೆದೈವಗಳ ಭಂಡಾರ ತೆಗೆಯುವುದು, ಕೊರತ್ತಿಯಮ್ಮನ ನೇಮ, ಪಾಷಾಣಮೂರ್ತಿ ದೈವಗಳ ಹಾಗೂ ಕುಪ್ಪೆ ಪಂಜುರ್ಲಿ ದೈವದ ನೇಮ ನಡೆಯಿತು.
ಡಿ. ೯ರಂದು ಪ್ರಾತಃಕಾಲ ಶ್ರೀ ಧರ್ಮದೈವ ಪಞಿಯಾಟ ಚಾಮುಂಡಿ ನೇಮ ಮತ್ತು ಸಹಾಯ ಗುಳಿಗನ ಪ್ರತಿಷ್ಠೆ ಹಾಗೂ ಕೋಲ, ಭೂಮಿ ಗುಳಿಗನ ಕೋಲ, ದೈವದ ಭಂಡಾರ ತರವಾಡು ಮನೆಗೆ ಸೇರಿಸುವುದು, ಸನ್ನಸಂತರ್ಪಣೆ ನಡೆಯಿತು.
ಊರವರು ಹಾಗೂ ಬಂಧುಗಳು ಉಪಸ್ಥಿತರಿದ್ದು, ದೈವದ ಪ್ರಸಾದ ಸ್ವೀಕರಿಸಿದರು.


















