ಅಂತರ್ ಕಾಲೇಜು ಪಿಯು ಮಟ್ಟದ “ಪ್ರೇರಣ 2025 ” ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ

0

ಡಿ. ೧೧ ರಂದು ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನಲ್ಲಿ ನಡೆದ ಅಂತರ್ ಪಿಯು ಕಾಲೇಜು ಮಟ್ಟದ “ಪ್ರೇರಣ ೨೦೨೫” ಸ್ಪರ್ಧೆಗಳಲ್ಲಿ ಭಾಗವಹಿಸಿದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಫೇಸ್ ಪೇಂಟಿಂಗ್ ಸ್ಪರ್ಧೆಯಲ್ಲಿ ನೇಹ ಮತ್ತು ಯಶ್ಮಿತಾ ಪ್ರಥಮ, ಮತ್ತು ಮಾರ್ಕೆಟಿಂಗ್ ಕ್ವಿಜ್ ಸ್ಪರ್ಧೆಯಲ್ಲಿ ಪ್ರಜ್ವಲ್ ಮತ್ತು ಹಾರ್ದಿಕ್ ಪ್ರಥಮ, ಸಮೂಹ ನೃತ್ಯದಲ್ಲಿ ಹಸ್ತ, ತನ್ಮಯಿ, ಸೃಷ್ಟಿ, ಜನ್ಯ, ಅನಘ, ಧನ್ಯ ತಂಡದವರು ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸಂಕೀರ್ತ್ ಹೆಬ್ಬಾರ್ ಹಾಗೂ ಉಪನ್ಯಾಸಕಿಯರಾದ ಅರುಣಾ. ಎ, ಸುಜಾತಾ, ಸುಷ್ಮಾ ಇವರು ಸಹಕರಿಸಿದರು.