ಸುಳ್ಯ ತಮಿಳು ರಿಪಾಟ್ರಿಯೇಟ್ಸ್ ಯುನೈಟೆಡ್ ಸೇವಾ ಟ್ರಸ್ಟ್ ನಿಂದ ತಮಿಳು ಕಲಿಕಾ ಶಿಬಿರ

0

ಸುಳ್ಯ ತಮಿಳು ರಿಪಾಟ್ರಿಯೇಟ್ಸ್ ಯುನೈಟೆಡ್ ಸೇವಾ ಟ್ರಸ್ಟ್ ಇದರ ವತಿಯಿಂದ ತಮಿಳು ಕಲಿಕಾ ತರಬೇತಿ ಶಿಬಿರವು ದಿನಾಂಕ ಮೇ.6ರಂದು ಆರಂಭಗೊಂಡು ಮೇ.19ರ ವರೆಗೆ ನಡೆಯಿತು.

ಸಮಾರೋಪ ಸಮಾರಂಭವು ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ ಹಾಗೂ ಸುಬ್ರಹ್ಮಣ್ಯ ಮರ್ದಾಲ ದಲ್ಲಿ ನೆರವೇರಿತು. ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಪೂವೇಂದ್ರನ್ ಕೂಟೇಲು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅರುಳಪ್ಪನ್ ನಿವೃತ್ತ ತಮಿಳು ಶಿಕ್ಷಕರು, ದಯಾಳನ್ ಬಾರ್ಪನೆ, ಕೃಷ್ಣಮೂರ್ತಿ ಸುಂಕದಕಟ್ಟೆ ಹಾಗೂ ತಮಿಳು ಕಲಿಕಾ ತರಬೇತಿ ಶಿಕ್ಷಕರು ‌ಭಾಗವಹಿಸಿದರು.
ಈ ಶಿಬಿರದಲ್ಲಿ 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.