ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದ ಆಯಿಷ ಅಲ್ ಝೀನಾ ತೆಕ್ಕಿಲ್ ರಿಗೆ ಸನ್ಮಾನ

0

ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಪ್ರೆಸ್ಟೀಜ್ ಕಾಲೇಜಿನ ವಿದ್ಯಾರ್ಥಿನಿ ಶೇ.98 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದು ಅವಿಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನ ಪಡೆದ ಅರಂತೋಡಿನ ತೆಕ್ಕಿಲ್ ಕುಟುಂಬದ ಆಯಿಷ ಅಲ್ ಝೀನಾ ತೆಕ್ಕಿಲ್ ಅವರನ್ನು ಮೇ.26 ರಂದು ಮಂಗಳೂರಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ಕರ್ನಾಟಕ ಸರಕಾರದ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಮತ್ತು ತಾಯಿ ರಝೀಯಾ ಬೇಗಮ್ ತೆಕ್ಕಿಲ್ ಚಿಪ್ಪಾರ್ ರವರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಆರ್ಥಿಕ ಕಾರ್ಯದರ್ಶಿ ಎಲ್.ಕೆ. ಅತೀಕ್, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ನಸೀರ್ ಅಹಮ್ಮದ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ನಿರ್ದೇಶಕ ಡಾ| ಮುಹಮ್ಮದ್ ತಾಹಿರ್, ಮಂಗಳೂರು ಶಿಕ್ಷಣ ಸಂಸ್ಥೆಯ ಚೇರ್ ಮ್ಯಾನ್ ಡಾ| ಎಸ್.ಎಂ. ರಶೀದ್ ಹಾಜಿ, ಬರಕಾ ಗ್ರೂಪ್ ಇನ್ಸ್ಟಿಟ್ಯೂಶನ್ ಚೇಯರ್ ಮ್ಯಾನ್ ಮೊಹಮ್ಮದ್ ಅಶ್ರಫ್, ಬೆಂಗಳೂರು ಪ್ರೀಮಿಯರ್ ಎಜ್ಯುಕೇಶನ್ ಸೊಸೈಟಿಯ ಚೇಯರ್ ಮ್ಯಾನ್ ಇಕ್ಬಾಲ್ ಅಹಮ್ಮದ್, ಹೆಚ್.ಆರ್. ಎಜ್ಯುಕೇಶನ್ ಪೌಂಡೇಶನ್ ನ ಚೇಯರ್ ಮ್ಯಾನ್ ಹೈದರ್ ಆಲಿ, ಮೀಫ್ ನ ಅಧ್ಯಕ್ಷ ಮೂಸಬ್ಬ.ಪಿ, ಮೀಫ್ ನ ಗೌರವ ಸಲಹೆಗಾರ ಸಯ್ಯದ್ ಮೊಹಮ್ಮದ್ ಬ್ಯಾರಿ, ಗೌರವಾಧ್ಯಕ್ಷ ಉಮ್ಮರ್ ತೋಕೆ ಮೊದಲಾದವರು ಉಪಸ್ಥಿತರಿದ್ದರು.