ಸುಳ್ಯ ತಾಲೂಕು ಆಸ್ಪತ್ರೆಗೆ ಶಾಸಕರ ಭೇಟಿ – ಪ್ರಸೂತಿ ತಜ್ಞರೊಂದಿಗೆ ಸಮಾಲೋಚನೆ

0

ಖಾಯಂ ಪ್ರಸೂತಿ ತಜ್ಞರ ನೇಮಕವಾಗುವರೆಗೆ ಡಾ.ವೀಣಾರವರು ಮುಂದುವರಿಯಲು ಕೋರಿಕೆ

ಸುಳ್ಯ ತಾಲೂಕು ಆಸ್ಪತ್ರೆಗೆ ಶಾಸಕರು‌ ಭೇಟಿ ನೀಡಿ ಪ್ರಸೂತಿ ತಜ್ಞರಾಗಿರುವ ಡಾ.ವೀಣಾರವರ ಜತೆ ಸಮಾಲೋಚನೆ ನಡೆಸಿದ್ದು, ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕದವರೆಗೆ ತಾವೇ ಸೇವೆಯಲ್ಲಿ ಮುಂದುವರಿಯುವಂತೆ ತಿಳಿಸಿದ್ದಾರೆಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ್ ಕೆ.ವಿ. ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಆಡಳಿತ ವೈದ್ಯಾಧಿಕಾರಿಗಳು ‘ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ರವರು ದಿನಾಂಕ 29/05/2024 ರಂದು ಸುಳ್ಯ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಹಾಗೂ ತಾಲೂಕು ಆಸ್ಪತ್ರೆ ಯಲ್ಲಿ ಕರೆಯಾಧಾರಿತ ಸೇವೆ ಸಲ್ಲಿಸುತ್ತಿದ್ದ ಹೆರಿಗೆ ತಜ್ಞರಾದ ಡಾ. ಶ್ರೀಮತಿ ವೀಣಾ ಎನ್ ರವರೊಡನೆ ಸಮಾಲೋಚನೆ ನಡೆಸಿರುತ್ತಾರೆ. ತಾಲೂಕು ಆಸ್ಪತ್ರೆ ಸುಳ್ಯ ದಲ್ಲಿ ಖಾಯಂ ಹೆರಿಗೆ ತಜ್ಞರ ನೇಮಕಾತಿ ಆಗುವ ವರೆಗೆ ಸೇವೆ ಮುಂದುವರಿಸುವಂತೆ ಡಾ. ಶ್ರೀಮತಿ ವೀಣಾ ಎನ್ ರವರನ್ನು ಕೋರಿರುತ್ತಾರೆ.

ತಾಲೂಕು ಆಸ್ಪತ್ರೆಯ ಸಿಬ್ಬಂಧಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ವೈದ್ಯರೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿರುತ್ತಾರೆ.ಸಿಬ್ಬಂಧಿಗಳ ದೂರುಗಳ ಬಗ್ಗೆ ಇಲಾಖಾ ನಿಯಮಗಳಂತೆ ಕ್ರಮ ಕೈಗೊಳ್ಳುವಂತೆ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿರುತ್ತಾರೆ. ತಾಲೂಕು ಆಸ್ಪತ್ರೆಯ ಸಿಬ್ಬಂಧಿಗಳಲ್ಲಿ ಶಿಸ್ತನ್ನು ಕಾಪಾಡುವ ಜವಾಬ್ದಾರಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳದ್ದಾಗಿದೆ ಎಂಬುದಾಗಿ ಶಾಸಕರು ಸೂಚಿಸಿರುತ್ತಾರೆ ಎಂದು ಅವರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.