ಕಡಬ ಸಮೀಪ ಬೈಕ್ ಗೆ ಪಿಕಪ್ ಡಿಕ್ಕಿಯಾಗಿ ಪಿಕಪ್ ಪರಾರಿ

0

ನಿಂತಿಕಲ್ಲಿನಲ್ಲಿ ಪಿಕಪನ್ನು ಅಡ್ಡಗಟ್ಟಿ ನಿಲ್ಲಿಸಿದ ಸಾರ್ವಜನಿಕರು

ಕಡಬ ಸಮೀಪ ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿ ಪಿಕಪನ್ನು ನಿಂತಿಕಲ್ಲಿನಲ್ಲಿ ತಡೆದು ನಿಲ್ಲಿಸಿ ಪೊಲೀಸರಿಗೊಪ್ಪಿಸಿದ ಘಟನೆ ಇಂದು ನಡೆದಿದೆ.
ಕಡಬ ಕಡೆಯಿಂದ ಪಂಜ ಕಡೆಗೆ ಬರುತ್ತಿದ್ದ ಪಿಕಪ್ ಕಡಬ ಕಡೆಗೆ ಹೋಗುವ ಬೈಕಿಗೆ ಡಿಕ್ಕಿ ಹೊಡೆಯಿತು.


ಪರಿಣಾಮ ಎಡಮಂಗಲದ ಬೈಕ್ ಸವಾರರಿಗೆ ಕಾಲಿಗೆ ಗಂಭೀರ ಗಾಯವಾಗಿದ್ದು ಪಿಕಪ್ ಡ್ರೈವರ್ ಗಾಡಿ ನಿಲ್ಲಿಸಿದೆ ಪರಾರಿಯಾಗಲೆತ್ನಿಸಿದ್ದು ಪಿಕಪನ್ನು ನಿಂತಿಕಲ್ಲಿನಲ್ಲಿ ಸಾರ್ವಜನಿಕರು ತಡೆದು ನಿಲ್ಲಿಸಿದ ಘಟನೆ ನಡೆದಿದೆ.


ಬಳಿಕ ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ನಂತರ ಕಡಬ ಪೊಲೀಸರು ಸ್ಥಳಕ್ಕೆ ಬಂದು ಪಿಕಪ್ ವಾಹನ ಹಾಗೂ ಡ್ರೈವರನ್ನು ಕಡಬ ಠಾಣೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಕಾಲಿಗೆ ಗಂಭೀರ ಗಾಯಗೊಂಡ ಬೈಕ್ ಸವಾರರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.