ಬೆಳ್ಳಾರೆ ಕೆಪಿಎಸ್ : ಎನ್ಎಂಎಂಎಸ್ ಸ್ಕಾಲರ್ ಶಿಪ್ ಗೆ ಆಯ್ಕೆ

0

ಬೆಳ್ಳಾರೆ ಕೆಪಿಎಸ್ ನ ಪ್ರೌಢಶಾಲಾ ವಿಭಾಗದ 8 ನೇ ತರಗತಿಯ ನಾಲ್ಕು ವಿದ್ಯಾರ್ಥಿಗಳು ಎನ್ಎಂಎಂಎಸ್ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿ ದ್ವಿತೀಯ ಪಿಯುಸಿವರೆಗೆ ಮೆರಿಟ್ ಸ್ಕಾಲರ್ ಶಿಪ್ ಪಡೆಯಲು ಅರ್ಹರಾಗಿದ್ದಾರೆ.

ಬೆಳ್ಳಾರೆ ಜನತಾ ಮನೆಯ ವಿಜಯಕುಮಾರ್ – ದಿವ್ಯ ಜ್ಯೋತಿ ದಂಪತಿಗಳ ಪುತ್ರಿ ಅಂಜನಾ, ಬೆಳ್ಳಾರೆ ಮಾಲೆಂಗ್ರಿ ಇಸಾಕ್ ಮತ್ತು ಸಫಿಯ ದಂಪತಿಗಳ ಪುತ್ರ ಮೊಹಮದ್ ಶಿಹಾಬ್, ಬೆಳ್ಳಾರೆ ಪಾಟಾಜೆ ಆದಿತ್ಯ ಮತ್ತು ಪುಷ್ಪ ಆದಿತ್ಯ ದಂಪತಿಗಳ ಪುತ್ರಿ ಮಾನ್ವಿ, ಬೆಳ್ಳಾರೆ ಕಿನ್ನಮಜಲು ದಿ.ಮಹಾಬಲ ಮತ್ತು ಕುಸುಮಾವತಿ ದಂಪತಿಗಳ ಪುತ್ರ ಧನ್ವಿತ್ ಆಯ್ಕೆಯಾಗಿರುವ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕರು ಹಾಗೂ ವಿಷಯ ಶಿಕ್ಷಕರು ಸಹಕಾರ ನೀಡಿದ್ದರು.