ಮಾನ್ಯಡ್ಕ ಸ. ಕಿ. ಪ್ರಾ. ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ

0

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾನ್ಯಡ್ಕ ಇಲ್ಲಿ 2024-25 ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಮಕ್ಕಳನ್ನು ಮೆರವಣಿಗೆಯ ಮೂಲಕ ಶಾಲೆಗೆ ಕರೆತಂದು ಆರತಿ ಬೆಳಗಿ ಸ್ವಾಗತಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೇಡಪ್ಪ ಗೌಡ , ಉಪಾಧ್ಯಕ್ಷರಾದ ಶ್ರೀಮತಿ ಹೇಮಾ ಆಲಾಜೆ ,ಮುಖ್ಯಶಿಕ್ಷಕರರಾದ ಶ್ರೀಮತಿ ಅಮೃತಾ ಬಿ ಎನ್ ,ಅಥಿತಿ ಶಿಕ್ಷಕರಾದ ಶ್ರೀಮತಿ ತೀರ್ಥಕುಮಾರಿ ,ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಪುಸ್ತಕ ವಿತರಣೆ ಮತ್ತು ಸಮವಸ್ತ್ರ ವಿತರಣೆಯ ಜೊತೆಗೆ ಸಿಹಿಯೂಟ ನೀಡಲಾಯಿತು.