ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಶಾಲಾ ಪ್ರಾರಂಭೊತ್ಸವ

0

ಸುಳ್ಯ ಸೈಂಟ್ ಬ್ರಿಜಿಡ್ಸ್ ಕನ್ನಡ ಮಾದ್ಯಮ ಶಾಲೆ ಪ್ರಾರಂಭೊತ್ಸವ ಕಾರ್ಯಕ್ರಮ ಮೆ.31 ರಂದು ನಡೆಯಿತು.
ನೂತನವಾಗಿ ಸೇರ್ಪಡೆಗೊಂಡ ಮಕ್ಕಳ ವಿಶೇಷವಾಗಿ ಸ್ವಾಗತಿಸಿ ಶಾಲೆಯ ಆವರಣದಲ್ಲಿ ಚೆಂಡೆ ವಾದ್ಯಗಳೊಂದಿಗೆ ಶಾಲಾ ಸಂಚಾಲಕರು ಹಾಗೂ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿ ಶಾಲೆಗೆ ಬರಮಾಡಿಕೊಂಡರು.

ನಂತರ ಶಾಲಾ ಸಭಾಂಗಣದಲ್ಲಿ ಮರಳಿ ಶಾಲೆ ಆರಂಭ ಕಾರ್ಯಕ್ರಮ ನಡೆಯಿತು.

ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ರೆ.ಪಾ.ವಿಕ್ಟರ್ ಡಿಸೋಜ ಉದ್ಘಾಟಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಆಂತೊನಿ ಮೇರಿ ಸಭಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಗತಿಸಿ ಶುಭ ಹಾರೈಸಿದರು.
ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ,ಶಿಕ್ಷಕರು ವಿದ್ಯಾರ್ಥಿಗಳ ಪೊಷಕರು ಮೊದಲಾದವರು ಉಪಸ್ಥಿತರಿದ್ದರು