ವಿಧಾನ ಪರಿಷತ್ ಚುನಾವಣೆ : ಸುಳ್ಯ ಮತ ಕೇಂದ್ರದ ಹೊರಗಡೆ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಮತಯಾಚನೆ

0

ಪದವೀಧರ ಮತ್ತು ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಕ್ಕೆ ಚುನಾವಣೆಗೆ ಸುಳ್ಯ ತಾಲೂಕು ಕಚೇರಿಯ ಮತದಾನ ಕೇಂದ್ರದಲ್ಲಿ ಜೂ.3 ರಂದು ಮುಂಜಾನೆಯಿಂದ ಮತದಾನ ನಡೆಯುತ್ತಿದೆ.

ಮತದಾನ ಕೇಂದ್ರದ 100 ಮೀಟರ್ ದೂರದಲ್ಲಿ ಬಿಜೆಪಿ ಪಕ್ಷ ದ ಕಾರ್ಯಕರ್ತರು ಅವರ ಅಭ್ಯರ್ಥಿಗಳ ಮತಯಾಚನೆ ನಡೆಸಿದರು.
ಪಂಜ ಹೋಬಳಿಯ ಮತದಾರರು ಮುಂಜಾನೆಯಿಂದಲೇ ಮತದಾನ ಮಾಡಿದರು. ಶಾಸಕಿ ಭಾಗೀರಥಿ ಮುರುಳ್ಯ,ಮುಖಂಡರಾದ ವಿನಯ್ ಕಂದಡ್ಕ,ಪಿಕೆ ಉಮೇಶ್, ವೆಂಕಟ್ ದಂಬೇಕೋಡಿ,ಎ.ಟಿ ಕುಸುಮಾಧರ, ಚಂದ್ರ ಕೋಲ್ಚಾರ್,ಸಂತೋಷ್ ಕುತ್ತಮೊಟ್ಟೆ, ಜೆಡಿಯಸ್ ಜಾಕೆ ಮಾಧವ ಗೌಡ,ಕಾರ್ಯಕರ್ತರು ಉಪಸ್ಥಿತರಿದ್ದರು.