ಆಲೆಟ್ಟಿ: ಗುಂಡ್ಯ ಕುಟುಂಬದ ಯಜಮಾನ ಬೆಳ್ಯಪ್ಪ ಗೌಡ ನಿಧನ

0

ಆಲೆಟ್ಟಿ ಗ್ರಾಮದ ಉದಯಗಿರಿ ಗುಂಡ್ಯ ಕುಟುಂಬದ ಯಜಮಾನ ಬೆಳ್ಯಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಚೋಮಕ್ಕ, ಪುತ್ರರಾದ ಮೇದಪ್ಪ ಗೌಡ ಗುಂಡ್ಯ, ಪದ್ಮಯ್ಯ ಗೌಡ ಗುಂಡ್ಯ, ಚಿದಾನಂದ ಗುಂಡ್ಯ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ,
ಶ್ರೀಮತಿ ಶೇಷಮ್ಮ, ಸೊಸೆಯಂದಿರಾದ


ಶ್ರೀಮತಿ ಮೋಹಿನಿ, ಶ್ರೀಮತಿ ಜಯಲಕ್ಷ್ಮಿ ಮತ್ತು ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕಳೆದ ಹಲವಾರು ವರ್ಷಗಳಿಂದ ಉದಯಗಿರಿ ಗುಂಡ್ಯ ತರವಾಡು ಮನೆಯ ಯಜಮಾನರಾಗಿದ್ದರು.