ಬಜಪ್ಪಿಲ ಕ್ಷೇತ್ರ ಜೀರ್ಣೋದ್ಧಾರ : ಭೂಮಿ ಪೂಜೆ ಹಾಗೂ‌ ಕುತ್ತಿ ಹಾಕುವ ಕಾರ್ಯ

0

ಇತಿಹಾಸ ಪ್ರಸಿದ್ಧ ಬಜಪ್ಪಿಲ ಇರುವೆರು ಉಳ್ಳಾಕುಲು, ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ಭೂಮಿ ಪೂಜೆ ಹಾಗೂ ಕುತ್ತಿ ಹಾಕುವ ಕಾರ್ಯ ಜೂ.9ರಂದು ನಡೆಯಿತು.

ಕುಂಟಾರು ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು. ಉಪೇಂದ್ರ ಆಚಾರ್ಯ ಮಂಡೆಕೋಲು ಕುತ್ತಿ ಹಾಕುವ ಕಾರ್ತ ನೆರವೇರಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಆಡಳಿತ ಸಮಿತಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡರಮನೆ ಹಾಗೂ ಪೇರಾಲು ಹದಿನಾರು ಮನೆಯವರು, ದೈವಸ್ಥಾನದ ಪೂಜಾರಿ ದಿನೇಶ್ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಜೀರ್ಣೋದ್ಧಾರ ಸಮಿತಿ ಹಾಗೂ ಪು ಸಮಿತಿಗಳ ಪದಾಧಿಕಾರಿಗಳು ಹಾಗೂ ಅಂಬ್ರೋಟಿ, ಅತ್ಯಾಡಿ, ನಾರಾಲು, ಶಿರಾಜೆ ಮತ್ತು ಮುಳ್ಯ ವ್ಯಾಪ್ತಿಯ ಭಕ್ತಾದಿಗಳು ಉಪಸ್ಥಿತರಿದ್ದರು.

2024 ಡಿಸೆಂಬರ್ ತಿಂಗಳ ಆರಂಭದಲ್ಲಿ ಕೆಲಸ ಮುಗಿದು ಡಿಸೆಂಬರ್ 21 ಮತ್ತು 22 ಬ್ರಹ್ಮಕಲಶೋತ್ಸವ ನಡೆಯಲಿದೆ.