ಬೆಟ್ಟಂಪಾಡಿ : ಮಳೆ ನೀರಿಗೆ ಕಾಂಕ್ರೀಟ್ ರಸ್ತೆಗೆ ಕೊಚ್ಚಿ ಬಂದ ಕಲ್ಲು, ಮಣ್ಣು

0

ಚರಂಡಿ ದುರಸ್ತಿಗೆ ಸ್ಥಳೀಯರ ಆಗ್ರಹ

ಶಾಂತಿನಗರದಿಂದ ಬೆಟ್ಟಂಪಾಡಿ ಆಶ್ರಯ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬದಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರಿಗೆ ಕಲ್ಲು ಮಣ್ಣುಗಳು ಕೊಚ್ಚಿಕೊಂಡು ಬಂದು ರಸ್ತೆಯಲ್ಲಿ ನಿಂತಿದೆ.


ಇದರಿಂದ ಸ್ಥಳೀಯ ನಿವಾಸಿಗಳಿಗೂ ಮತ್ತು ವಾಹನ ಸವಾರರಿಗೂ ಸಂಚರಿಸಲು ಸಮಸ್ಯೆ ಉಂಟಾಗಿದ್ದು ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಇಲ್ಲಿ ಮಳೆನೀರು ಚರಂಡಿಯಲ್ಲಿ ಹೋಗಲು ಸರಿಯಾಗಿ ವ್ಯವಸ್ಥೆ ಮಾಡದಿರುವುದರಿಂದ ರಸ್ತೆಯಲ್ಲಿ ಓಡಾಡುವಂತ ನಾಗರಿಕರಿಗೆ ಹಾಗು ಶಾಲಾ ಮಕ್ಕಳಿಗೆ ರಸ್ತೆಯಲ್ಲಿ ಹೋಗಲು ಅಸಾಧ್ಯವಾಗಿದೆ.
ಹಾಗು ನೀರು ರಸ್ತೆಯಲ್ಲೇ ಹೋಗಿರುವುದರಿಂದ ಮೋರಿ ಪಕ್ಕದಲ್ಲಿ ಸ್ವಲ್ಪ ಬಾಗ ಕುಸಿದಿದ್ದು ಇನ್ನೂ ಮಳೆ ಜೋರಾದ ಸಂದರ್ಭ ಅಥವಾ ಘನ ವಾಹನಗಳು ಬಂದಂತಹ ಸಂದರ್ಭಲ್ಲಿ ಕುಸಿದು ಬೀಳುವ ಸಾಧ್ಯತೆ ಇದ್ದು ಅಪಾಯ ಹೆಚ್ಚಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.