ಬೆಳ್ಳಾರೆಯಲ್ಲಿ 1815 ನೇ ಮದ್ಯವರ್ಜನಾ ಶಿಬಿರದ ಪೂರ್ವಭಾವಿ ಸಭೆ

0

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ರಾಜೀವಿ ರೈ ಆಯ್ಕೆ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಬೆಳ್ಳಾರೆಯಲ್ಲಿ ನಡೆಯಲಿರುವ 1815 ನೇ ಮದ್ಯವರ್ಜನಾ ಶಿಬಿರದ ಪೂರ್ವ ಭಾವಿ ಸಭೆಯು ಜೂ.10 ರಂದು ಬೆಳ್ಳಾರೆ ಅಜಪಿಲಮಹಾಲಿಂಗೇಶ್ವರ ದೇವಸ್ಥಾನದಸಭಾಭವನದಲ್ಲಿ ನಡೆಯಿತು.

ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್ ದೀಪ ಪ್ರಜ್ವಲಿಸಿದರು.
ಮುಂದಿನ ತಿಂಗಳ
ಜು.2 ರಿಂದ 9 ರ ತನಕ ಬೆಳ್ಳಾರೆಯಲ್ಲಿ ನಡೆಯಲಿರುವ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ರಾಜೀವಿ ರೈ, ಗೌರವಾಧ್ಯಕ್ಷ
ಸುರೇಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುನಿಲ್ ರೈ, ಶಕುಂತಲಾ ನಾಗರಾಜ್, ಪ್ರಮೋದ್ ಶೆಟ್ಟಿ, ವಿಟ್ಟಲ್ ದಾಸ್, ಪ್ರದೀಪ್ ರೈ, ಅನುಸೂಯ ಪೆರುವಾಜೆ, ಹರ್ಶನ್ ಕೆ.ಟಿ, ನವೀನ್ ಸಾರಕೆರೆ, ಶ್ರೀಮತಿ ವೀಣಾ, ಕೋಶಾಧಿಕಾರಿ ಮಿಥುನ್ ಶೆಣೈ, ಗೌರವ ಸಲಹೆಗಾರರಾಗಿ
ನಿರ್ಮಲ ಜಯರಾಮ್, ಪದ್ಮನಾಭ ಶೆಟ್ಟಿ ಪೆರುವಾಜೆ, ಗಣಪಯ್ಯ ವನಶ್ರೀ, ವೀರನಾಥ್ ಬೆಳ್ಳಾರೆ, ರಮೇಶ್
ಮಠತಡ್ಕ, ಹರಿಣಾಕ್ಷಿ ರೈ, ವೆಂಕಟ್ರಮಣ, ಕುಶಾಲಪ್ಪ ಗೌಡ, ಪ್ರೀತಂ ರೈ ಪೆರುವಾಜೆ, ಸುರೇಶ್ ಕಣೆಮರೆಡ್ಕ, ಶ್ರೀರಾಮ್ ಪಾಟಾಜೆ, ಆರ್. ಕೆ ಭಟ್, ಚಂದ್ರಶೇಖರ ಪನ್ನೆ ಯವರನ್ನು ಆಯ್ಕೆ ಮಾಡಲಾಯಿತು.


ದ.ಕ ಜಿಲ್ಲೆ ನಿರ್ದೇಶಕ ಪ್ರವೀಣ ಕುಮಾರ್ ಪ್ರಾಸ್ತಾವಿಕ ಮಾತಾನಾಡಿದರು. ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿದರು. ತಾಲೂಕುಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿದರು. ಬೆಳ್ಳಾರೆ ವಲಯ ಮೇಲ್ವಿಚಾರಕಿ ವಿಶಾಲ ಕೆ ವಂದಿಸಿದರು.
ಕೇಂದ್ರ ಒಕ್ಕೂಟ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಬೆಳ್ಳಾರೆ ವಲಯದ ಅಧ್ಯಕ್ಷ ಆನಂದ ಗೌಡ, ಶ್ರೀಮತಿ ವೇದ ಶೆಟ್ಟಿ ಜಾಲ್ಸೂರು ವಲಯಾಧ್ಯಕ್ಷ ಭಾಸ್ಕರ್, ಅಜ್ಜಾವರ ವಲಯಾಧ್ಯಕ್ಷ ಶಿವಪ್ರಕಾಶ್ಅಡ್ಪಂಗಾಯ, ದೊಡ್ಡತೋಟವಲಯಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಸುಬ್ರಮಣ್ಯವಲಯಾಧ್ಯಕ್ಷ ಮಾಧವ ಚಾಂತಾಳ, ಬೆಳ್ಳಾರೆ ವಲಯಾಧ್ಯಕ್ಷ ಆನಂದ ಗೌಡ, ಜೆಸಿಐ ವಲಯಾಧಿಕಾರಿ, ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷರು, ನವಜೀವನ ಸಮಿತಿಯ ಅಧ್ಯಕ್ಷರು, ಬೆಳ್ಳಾರೆ , ಪೆರುವಾಜೆ, ಐವರ್ನಾಡು, ಬಾಳಿಲ,ಕೊಡಿಯಾಲ ,


ಪಾಲೆಪ್ಪಾಡಿ, ಮುಪ್ಪೆರ್ಯ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನಿಕಟ ಪೂರ್ವ ಅಧ್ಯಕ್ಷರು ಗಳು, ಜ್ಞಾನ ವಿಕಾಸ ಕೇಂದ್ರದ ಸಂಯೋಜಕರು ಶೌರ್ಯ ವಿಪತ್ತು ಘಟಕದ ಸಂಯೋಜಕರು, ಬಾಳಿಲ, ಪೆರುವಾಜೆ, ಐವರ್ನಾಡು, ಕೊಡಿಯಾಲದ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಪಂ. ಮಾಜಿ ಅಧ್ಯಕ್ಷರು, ತಾಲೂಕುಮೇಲ್ವಿಚಾರಕರು, ಬೆಳ್ಳಾರೆ ವಲಯದ ಎಲ್ಲಾಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.