ಸುಬ್ರಹ್ಮಣ್ಯ :ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮ

0

ಮಳೆಗಾಲದ ಮಾಹೋನ್ನತ ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮ, ಶ್ರೀ ವನದುರ್ಗಾ ದೇವಿ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ಅವರು ವಹಿಸಿದ್ದರು.
ಮುಖ್ಯ ಅತಿಥಿ ಗಳಾಗಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ರವಿ ಕಕ್ಕೆ ಪದವು , ಅನುಗ್ರಹ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಪ್ರಸಾದ್, ಸಂಗೀತ ಕಲಾವಿದರಾದ ಯಜ್ಞೇಶ್ ಆಚಾರ್, ಉದ್ಯಮಿಗಳಾದ ಉಮೇಶ್. ಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಹರೀಶ್ ಕಾಮತ್, ನಿವೃತ್ತ ಮುಖ್ಯ ಗುರುಗಳಾದವ ಶ್ರೀ ಕೃಷ್ಣ ಶರ್ಮ, ದೇವಳದ ನೌಕರಾದ ನಾಗೇಶ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಇಂಜಾಡಿ, ಕುಕ್ಕೆ ದೇವಳದ ನೌಕರಾದ ಪದ್ಮನಾಭ ಮುಂಚ್ಚಿತ್ತಾಯ,
ದೇವಳದ ಭದ್ರತಾ ಸಿಬ್ಬಂದಿ ಗಂಗಾಧರ, ಶೇಖರ್ ಆಗೋಳಿ ಕಜೆ, ಎಮ್. ಎಸ್ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ಶಿರಾಡಿ ಅವರುಗಳನ್ನು. ಸನ್ಮಾನಿಸಲಾಯಿತು.
ಉದ್ಯಮಿಗಳಾದ ಅಶೋಕ್ ರಾಜ್ ಮುಂಬೈ ವೇದಿಕೆಯಲ್ಲಿ,ಉಪಸ್ಥಿತರಿದ್ದರು.


ದಿ ವಿವೇಕಾನಂದ ಆಗೋಲಿಕಜೆ ಪರವಾಗಿ ಅವರ ಮಗ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷರಾದ ಸುದರ್ಶನ ಜೋಯಿಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ
ಯಕ್ಷಗಾನ ನೋಡುವುದು ಅಲ್ಲದೆ ಅದರಲ್ಲಿ ಬರುವ ಒಳ್ಳೆಯ ವಿಚಾರ ಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು,
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನೋಡಿ ಎಲ್ಲರಿಗೂ ಜೀವನದಲ್ಲಿ ಒಳ್ಳೆ ವಿಚಾರಗಳನ್ನು ಅಳವಡಿಸಿ ಕೊಳ್ಳ ಬಹುದು. ಇಲ್ಲಿ
ಒಳ್ಳೆಯ ಗಣ್ಯ ವ್ಯಕ್ತಿ ಗಳನ್ನು ಹುಡುಕಿ ಸನ್ಮಾನ ಮಾಡಿದ್ದಾರೆ.
ಯಕ್ಷಗಾನ ಸೇವೆ ಇನ್ನು ಮುಂದುವರಿಯಲಿ ಎಂದರು.

ಸಭಾ ಕಾರ್ಯಕ್ರಮ ಬಳಿಕ
ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.