ಹರಿಹರ :ನಾಗರ ಹಾವು ಕಡಿದು ವೃದ್ದೆ ಸಾವು

0

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠದ ವೃದ್ದೆಗೆ ನಾಗರ ಹಾವು ಕಚ್ಚಿ ಮೃತರಾದ 10 ದಿನದ ಬಳಿಕ ಮತ್ತೆ ಅದೇ ಮನೆಯಲ್ಲಿ ನಾಗರ ಹಾವು ಪತ್ಯಕ್ಷವಾದ ಘಟನೆ ಹರಿಹರದಿಂದ ವರದಿಯಾಗಿದೆ.

ಜೂ.3 ರಂದು ಮಿತ್ತಮಜಲಿನ ದೇವಮ್ಮ(67) ರವರು ತಮ್ಮ ಮನೆಯಲ್ಲಿ ಕೋಳಿ ಕಾಪುವಿಗೆ ಕೈ ಹಾಕಿದ್ದ ವೇಳೆ ನಾಗರ ಹಾವು ಕಡಿತಕ್ಕೆ ತುತ್ತಾಗಿ ಆಸ್ಪತ್ರೆ ತಲುಪುವಷ್ಟರಲ್ಲಿ ದಾರಿ ಮದ್ಯೆ ಕೊನೆಯುಸಿರೆಳೆದಿದ್ದರು. ಇಂದು ಅದೇ ಮನೆಯಲ್ಲಿ ನಾಗರ ಹಾವು ಪತ್ಯಕ್ಷವಾಗಿದೆ.

ಇದೇ ಹಾವು ಕಚ್ಚಿ ದೇವಮ್ಮ ಅವರು ನಿಧಾನರಾಗಿರುವುದಾಗಿ ನಂಬಲಾಗಿದೆ. ನಾಗರ ಹಾವನ್ನು ಸುಬ್ರಹ್ಮಣ್ಯದ ಮಾದವ ಎಂಬವರನ್ನು ಕರೆಸಿ ಹಾವು ಹಿಡಿಸಲಾಯಿತು. ಬಳಿಕ ಹಾವನ್ನು ಕಾಡಿಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.