ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗ – ಶಾಲಾ ಸಂಸತ್ತು ರಚನೆ

0

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಪ್ರಾಥಮಿಕ ವಿಭಾಗದಲ್ಲಿ ಶಾಲಾ ಸಂಸತ್ತನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಜೂನ್ 12 ರಂದು ಗೌಪ್ಯ ಮತದಾನದ ಮೂಲಕ ಚುನಾವಣೆಯನ್ನು ನಡೆಸಲಾಯಿತು.

ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ. ಯವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕ ರಾಜನಾಯಕ ಟಿ. ಚುನಾವಣಾ ಅಧಿಕಾರಿಯಾಗಿ, ಶಿಕ್ಷಕಿ ಶ್ರೀಮತಿ ರಾಜೀವಿ ಅಧ್ಯಕ್ಷಾಧಿಕಾರಿಯಾಗಿ ಸಹಕರಿಸಿದರು. ಶ್ರೀಮತಿ ಶಾಂತಕುಮಾರಿ, ಶ್ರೀಮತಿ ದಿವ್ಯಲತಾ, ಕುಮಾರಿ ಅಕ್ಷತಾ, ಕುಮಾರಿ ಪೂರ್ವಿ ಎನ್ ರೈ, ಕುಮಾರಿ ಶುಭಶ್ರೀ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

7 ನೇ ತರಗತಿ ಕನ್ನಡ ಮಾಧ್ಯಮ ವಿಭಾಗದ ಧನುಷ್ ಗೌಡ ಶಾಲಾ ಮುಖ್ಯಮಂತ್ರಿಯಾಗಿ ಹಾಗೂ 6 ನೇ ಆಂಗ್ಲ ಮಾಧ್ಯಮ ಬಿ ವಿಭಾಗದ ಮನ್ವಿ ಪಿ ಶಾಲಾ ಉಪ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರು.

ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ. ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಶಾಲಾ ಸಂಸತ್ತಿನ ಮಂತ್ರಿಗಳ ವಿವರ ಇಂತಿದೆ.

ವಾರ್ತಾ ಮಂತ್ರಿಯಾಗಿ ಮಾನ್ವಿ ರೈ (7 ಸಿ ಆಂಗ್ಲ ಮಾಧ್ಯಮ), ಉಪ ವಾರ್ತಾಮಂತ್ರಿಯಾಗಿ ಪ್ರೇಕ್ಷಾ ಎಸ್ ಪಿ ( 6 ಸಿ ಆಂಗ್ಲ ಮಾಧ್ಯಮ), ಗೃಹ ಮಂತ್ರಿಯಾಗಿ ವಚನ್ ಬಿ ಆರ್ ( 7 ಸಿ ಆಂಗ್ಲ ಮಾಧ್ಯಮ), ಉಪ ಗೃಹಮಂತ್ರಿಯಾಗಿ ಆಶ್ಲೇಷ್ ( 6 ಎ ಕನ್ನಡ ಮಾಧ್ಯಮ ), ಶಿಕ್ಷಣ ಮಂತ್ರಿಯಾಗಿ ಶಿವಾನಿ (7 ಸಿ ಆಂಗ್ಲ ಮಾಧ್ಯಮ), ಉಪ ಶಿಕ್ಷಣ ಮಂತ್ರಿಯಾಗಿ ವರ್ಷಾ (6 ಸಿ ಆಂಗ್ಲ ಮಾಧ್ಯಮ), ಪರಿಸರ ಮಂತ್ರಿಯಾಗಿ ನವೀನ ಕುಮಾರ್ ( 7 ಸಿ ಆಂಗ್ಲ ಮಾಧ್ಯಮ ), ಉಪ ಪರಿಸರ ಮಂತ್ರಿಯಾಗಿ ಗೌತಮ್ ( 6 ಸಿ ಆಂಗ್ಲ ಮಾಧ್ಯಮ), ಸ್ವಚ್ಚತಾ ಮಂತ್ರಿಯಾಗಿ ಪ್ರಣವಿ ( 7ನೇ),ಉಪ ಸ್ವಚ್ಚತಾ ಮಂತ್ರಿಯಾಗಿ ಪುಣ್ಯ ಜೆ ಕೆ ( 6 ಸಿ ಆಂಗ್ಲ ಮಾಧ್ಯಮ),ತಂತ್ರಜ್ಞಾನ ಮಂತ್ರಿಯಾಗಿ ಪ್ರಥಮ್ (7 ಎ ಕನ್ನಡ ಮಾಧ್ಯಮ), ಉಪ ತಂತ್ರಜ್ಞಾನ ಮಂತ್ರಿಯಾಗಿ ಅಹನ್ ಗೌಡ ( 6ನೇ) ಶಿಸ್ತು ಮಂತ್ರಿಯಾಗಿ ತನುಶ್ರೀ ( 7 ಸಿ ಆಂಗ್ಲ ಮಾಧ್ಯಮ), ಉಪ ಶಿಸ್ತು ಮಂತ್ರಿಯಾಗಿ ಬಿಂದುಶ್ರೀ( 6 ಎ ಕನ್ನಡ ಮಾಧ್ಯಮ ), ಆಹಾರಮಂತ್ರಿಯಾಗಿ ಯಶ್ವಿತಾ ಎಂ ಆರ್ (7 ಸಿ ಆಂಗ್ಲ ಮಾಧ್ಯಮ), ಉಪ ಆಹಾರ ಮಂತ್ರಿಯಾಗಿ ಗಗನ್ ( 6 ಸಿ ಆಂಗ್ಲ ಮಾಧ್ಯಮ),ನೀರಾವರಿ ಮಂತ್ರಿಯಾಗಿ ಮಹಮ್ಮದ್ ತಪ್ಸೀರ್ ( 7 ಸಿ ಆಂಗ್ಲ ಮಾಧ್ಯಮ),
ಉಪ ನೀರಾವರಿ ಮಂತ್ರಿಯಾಗಿ ಮಹಮ್ಮದ್ ಶಮ್ಮಾಝ್( 6 ಬಿ ಕನ್ನಡ ಮಾಧ್ಯಮ ),ಆರೋಗ್ಯ ಮಂತ್ರಿಯಾಗಿ ಚಿನ್ಮಯಿ ಸರಸ್ವತಿ ( 7 ಸಿ ಆಂಗ್ಲ ಮಾಧ್ಯಮ), ಉಪ ಆರೋಗ್ಯ ಮಂತ್ರಿಯಾಗಿ ವರ್ಷಿಣಿ ( 6 ಸಿ ಆಂಗ್ಲ ಮಾಧ್ಯಮ),
ಕ್ರೀಡಾ ಮಂತ್ರಿಯಾಗಿ ಲಾಲಿತ್ಯ ( 7 ಸಿ ಆಂಗ್ಲ ಮಾಧ್ಯಮ),
ಉಪ ಕ್ರೀಡಾ ಮಂತ್ರಿಯಾಗಿ ಧನುಷ್ (6 ಸಿ ಆಂಗ್ಲ ಮಾಧ್ಯಮ),
ಸಾಂಸ್ಕೃತಿಕ ಮಂತ್ರಿಯಾಗಿ ಪ್ರತೀಕ್ಷಾ ( 7 ಸಿ ಆಂಗ್ಲ ಮಾಧ್ಯಮ),
ಉಪ ಸಾಂಸ್ಕೃತಿಕಮಂತ್ರಿಯಾಗಿ ಮಹತಿ (6 ಸಿ ಆಂಗ್ಲ ಮಾಧ್ಯಮ ),
ವಿರೋಧ ಪಕ್ಷದ ನಾಯಕನಾಗಿ ದಿವ್ಯಾನ್ಷ್ ( 7 ಸಿ ಆಂಗ್ಲ ಮಾಧ್ಯಮ) ಆಯ್ಕೆಯಾಗಿದ್ದಾರೆ.