ಸುಳ್ಯ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಪೋಷಕರ ಸಭೆ

0

ಶಾಲಾ ನೂತನ ಪಿ. ಟಿ. ಎ ಉಪಾಧ್ಯಕ್ಷರಾಗಿ ಶಶಿಧರ ಎಂ. ಜೆ. ಆಯ್ಕೆ

ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲಾ 6 ರಿಂದ 7 ನೇ ತರಗತಿಯ ಪೋಷಕರ ಸಭೆಯು ಜೂ.20 ರಂದು ಸಂತ ಬ್ರಿಜಿಡ್ಸ್ ಸಭಾಂಗಣ ಸಭಾಂಗಣದಲ್ಲಿ ನಡೆಯಿತು.


ಕಳೆದ ಸಾಲಿನ ಪೋಷಕ ಸಮಿತಿಯ ಅಧ್ಯಕ್ಷರಾದ ಜೆ. ಕೆ. ರೈ, ಮುಖ್ಯೋಪಾಧ್ಯಾಯಿನಿ ಸಿ | ಮೇರಿ ಸ್ಟೆಲ್ಲಾ, ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಶೈಕ್ಷಣಿಕ ಚಟುವಟಿಕೆಗಳ ವರದಿಯನ್ನು ವಾಚಿಸಿದರು.ಸಭೆಯಲ್ಲಿ ತರಗತಿವಾರು ಪೋಷಕ ಪ್ರತಿನಿಧಿಗಳ ಆಯ್ಕೆ ನಡೆಯಿತು. ಪ್ರತಿನಿಧಿಗಳಾಗಿ ಹೇಮಂತ್ ಎನ್ ಎ, ಪೂರ್ಣಿಮಾ, ಜಗದೀಶ ಪೂಜಾರಿ, ಗುಲಾಬಿ ಎನ್, ದಿಗ್ಯಾ ನಾಯಕ್, ರೂಪ ಎಚ್ ಎಂ, ರಾಮಚಂದ್ರ ಎಂ, ಜೀವಿತಾ ಡಿ, ಜಗದೀಶ, ಶೇಖರ್ ಗೌಡ, ಯಕ್ಷಿತಾ ಕೆ, ಶಶಿಧರ ಎಂ ಜೆ, ಸುಷ್ಮಾ ದಿನೇಶ್, ಪ್ರಸನ್ನ ಪೀಟರ್ ಡಿಸೋಜ ಆಯ್ಕೆಯಾದರು. ಇವರಲ್ಲಿ ಶಶಿಧರ ಎಂ ಜೆ ಪಿ.ಟಿ.ಎ ಕಮಿಟಿಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆಯ್ಕೆಯಾದ ಪೋಷಕ ಪ್ರತಿನಿಧಿಗಳಿಗೆ ಸಂಚಾಲಕರು ಅಭಿನಂದಿಸಿದರು. ಕಳೆದ ಸಾಲಿನ ಎಲ್ಲ ಪೋಷಕ ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಜೆ ಕೆ ರೈ ಯವರು ತಮ್ಮ ಮನದಾಳದ ಮಾತುಗಳನ್ನಾಡಿದರು. ಶಶಿಧರ ಎಂ ಜೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ಸಭೆಯಲ್ಲಿ ಪೋಷಕರು ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಂಡರು. ಸಭಾಧ್ಯಕ್ಷರ ನೆಲೆಯಲ್ಲಿ ಸಂಚಾಲಕರಾದ ರೆ. ಫಾದರ್ ವಿಕ್ಟರ್ ಡಿಸೋಜಾ ರವರು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಮತ್ತು ಫೋಕ್ಸೋ ಕಾಯ್ದೆಯ ನಿಯಮಗಳನ್ನು ತಿಳಿಸಿ ಎಲ್ಲರನ್ನೂ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯನಿಯವರು ಪೋಷಕರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಸಹಶಿಕ್ಷಕಿ ಶ್ರೀಮತಿ ಭವ್ಯ ಸ್ವಾಗತಿಸಿ, ಶ್ರೀಮತಿ ಚೈತ್ರ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಮಮತಾ ಹಾಗೂ ಶ್ರೀಮತಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.