ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ವಿಶ್ವ ಯೋಗ ದಿನಾಚರಣೆ

0


ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಜೂ.೨೧ ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಯೋಗ ಶಿಕ್ಷಕ ಸಂತೋಷ್ ಮುಂಡೋಕಜೆ ಆಗಮಿಸಿ ಮಕ್ಕಳಿಗೆ ಯೋಗ ಹಾಗೂ ಇದರ ಮಹತ್ವವನ್ನು ತಿಳಿಸಿಕೊಟ್ಟರು.


ಶಾಲೆಯ ಸಂಚಾಲಕಿ ಗೀತಾಂಜಲಿ ಟಿ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿರಾದ ಪ್ರಮೀಳ, ರಂಜಿತ, ದೀಕ್ಷಾ ಹಾಗೂ ಸಹಾಯಕಿ ಸುಕನ್ಯ ರವರು ಸಹಕರಿಸಿದರು.