ಗ್ರಾ.ಪಂ. ವ್ಯಾಪ್ತಿಯಲ್ಲಿ ‌ಜೆಜೆಎಂ ಕಾಮಗಾರಿ : ಶಾಸಕರ ನೇತೃತ್ವದ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಿಂದ ಕಳಪೆ ಕಾಮಗಾರಿಯ ಆರೋಪ-ಥರ್ಡ್ ಪಾರ್ಟಿ ಇನ್ ಸ್ಪೆಕ್ಷನ್ ಗೆ ಒತ್ತಾಯ

0

ಒಂದು ತಿಂಗಳೊಳಗೆ ಪ್ರತೀ ಗ್ರಾ.ಪಂ. ಗೆ ಭೇಟಿ ನೀಡಿ ಸಭೆ ನಡೆಸಿ ವರದಿ ನೀಡಲು ಶಾಸಕರ ಸೂಚನೆ

ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ (ಮನೆ ಮನೆ ಗಂಗೆ) ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆ ಯಾಗಿದೆ ಎಂದು ಶಾಸಕರ ನೇತೃತ್ವದಲ್ಲಿ ತಾಲೂಕು ಪಂಚಾಯತ್‌ನಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿ, ಕೆಲವರು ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್‌ಗೆ ಒತ್ತಾಯಿಸಿದ ಹಾಗೂ ಶಾಸಕರು ಒಂದು ತಿಂಗಳೊಳಗೆ ಗ್ರಾ.ಪಂ.ಗೆ ಭೇಟಿ ನೀಡಿ ಪಂಚಾಯತ್ ಸದಸ್ಯರಿದ್ದು ಸಭೆ ನಡೆಸಿ ವರದಿ ನೀಡುವಂತೆ ಸೂಚಿಸಿದ ಘಟನೆ ವರದಿಯಾಗಿದೆ.


ಗ್ರಾ.ಪಂ. ವ್ಯಾಪ್ತಿಯ ಜೆಜೆಎಂ ಕಾಮಗಾರಿಯ ಅನುಷ್ಠಾನ ಪ್ರಗತಿಯ ಕುರಿತು ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ಸಭೆಯು ಜೂ. ೨೬ರಂದು ತಾ.ಪಂ. ಸಭಾಂಗಣದಲ್ಲಿ ನಡೆಯಿತು. ತಾಲೂಕಿನ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಮಂಜುನಾಥ್, ಇ.ಒ. ರಾಜಣ್ಣ, ಗ್ರೇಡ್ ೨ ತಹಶೀಲ್ದಾರ್ ಮಂಜುನಾಥ್, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎ.ಇ.ಇ. ರುಕ್ಕು ವೇದಿಕೆಯಲ್ಲಿದ್ದರು.
ಸಭೆಯ ಆರಂಭದಲ್ಲಿ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಅನುಷ್ಠಾನದ ಕುರಿತು ಸಭೆ ಕರೆದಿzವೆ. ತಮ್ಮ ತಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವ ರೀತಿಯಲ್ಲಿ ಕಾಮಗಾರಿ ನಡೆದಿದೆ ಎನ್ನುವ ವಿವರ ಇಂಜಿನಿಯರಿಂದ ಪಡೆಯಬಹುದು ಎಂದು ತಿಳಿಸಿದರು. ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎ.ಇ.ಇ. ರುಕ್ಕು ರವರು ಮೂರು ಹಂತದಲ್ಲಿ ಅನುದಾನಗಳು ಮಂಜೂರುಗೊಂಡಿದ್ದು, ಮೊದಲ ಹಂತದಲ್ಲಿ ೧೦ ಗ್ರಾ.ಪಂ. ಳನ್ನು ಆಯ್ದುಕೊಂಡಿದ್ದೆವು. ಕೆಲವು ಕಡೆ ಪಂಚಾಯತ್‌ಗಳಿಗೆ ಹಸ್ತಾಂತರ ಆಗಿದೆ. ಇನ್ನೂ ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ'' ಎಂದು ವಿವರ ನೀಡಿದರು. ಈ ವೇಳೆ ಮಾತನಾಡಿದ ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆಯವರು,ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದೆ. ಯೋಜನೆ ಬಂದಾಗ ನಮ್ಮ ಆಡಳಿತ ಮಂಡಳಿ ಇರಲಿಲ್ಲ. ಈಗ ನಮ್ಮಲ್ಲಿ ಯೋಜನೆಗಿಂತ ೧೨ವರೆ ಲಕ್ಷದ ಹೆಚ್ಚುವರಿ ಕೆಲಸ ಆಗಿದೆ. ಆ ಅನುದಾನವನ್ನು ಹೇಗೆ ಬರಿಸೋದು?” ಎಂದು ಪ್ರಸ್ತಾಪಿಸಿದರು. ಆಗ ಇಂಜಿನಿಯರ್ ಮಣಿಕಂಠರು , ಅರಂತೋಡು - ತೊಡಿಕಾನ ಗ್ರಾಮದಲ್ಲಿ ಯೋಜನೆ ಆರಂಭದ ಸಂದರ್ಭ ಬೇಡಿಕೆ ಕಡಿಮೆ ಇತ್ತು. ಆದರೆ ಕಾಮಗಾರಿ ಆರಂಭ ಆದಾಗ ನಮಗೆ ಬೇಕು ಎಂದು ಕೆಲವರು ಹೇಳಿದ್ದರಿಂದ ನಾವು ಕೆಲಸ ಮಾಡಿಸಿzವೆ. ಯಾಕೆಂದರೆ ಕಾಮಗಾರಿ ಗೈಡ್‌ಲೈನ್ ಹಾಗೇ ಇದೆ. ಆದ್ದರಿಂದ ಹೆಚ್ಚುವರಿ ಅನುದಾನ ಆಗಿದೆ'' ಎಂದು ಹೇಳಿದಾಗ,ಅದು ಹೌದು. ಈಗ ಈ ಹಣವನ್ನು ಬರಿಸೋದು ಯಾರೆನ್ನುವುದು ಪ್ರಶ್ನೆ. ಪಂಚಾಯತ್‌ನಿಂದ ಅಷ್ಟು ಕೊಡಲು ಸಾಧ್ಯ ಇಲ್ಲ. ಶಾಸಕರು ಅನುದಾನ ಬರಿಸಬೇಕು” ಎಂದು ಕೇಳಿದಾಗ, ಜೆಜೆಎಂ ಮುಂದಿನ ಯೋಜನೆಯಲ್ಲಿ ಸೇರಿಸಿ'' ಎಂದು ಇ.ಒ. ರಾಜಣ್ಣ ಇಂಜಿನಿಯರ್‌ರಿಗೆ ಸಲಹೆ ನೀಡಿದರು. ಕಾಮಗಾರಿ ಕಳಪೆ ಬಾಳಿಲ, ಐವರ್ನಾಡು, ಮಂಡೆಕೋಲು ಗ್ರಾ.ಪಂ. ವ್ಯಾಪ್ತಿಯ ಜೆಜೆಎಂ ಕಾಮಗಾರಿ ವಿವರ ಇಂಜಿನಿಯರ್ ಮಣಿಕಂಠರು ನೀಡಿದಾಗ, ಆ ವ್ಯಾಪ್ತಿಯ ಗ್ರಾ.ಪಂ. ಅಧ್ಯಕ್ಷರು ಅಲ್ಲಿಯ ಪೈಪ್ ಲೈನ್ ಕಾಮಗಾರಿ ಅಸಮರ್ಪಕ, ವಿದ್ಯುತ್ ಕನೆಕ್ಷನ್ ಆಗದಿರುವುದು ಹೇಳಿದರು. ಕಲ್ಮಡ್ಕ ಗ್ರಾ.ಪಂ. ವ್ಯಾಪ್ತಿಯ ಸರದಿ ಬಂದಾಗ ಪಂಚಾಯತ್ ಅಧ್ಯಕ್ಷ ಮಹೇಶ್ ಭಟ್ ಕರಿಕ್ಕಳರು ನಮ್ಮಲ್ಲಿ ಎರಡು ಕಾಮಗಾರಿ ಮಾತ್ರ ಹಸ್ತಾಂತರ ಆಗಿದೆ. ಅದನ್ನು ಜನರ ಒಪ್ಪಿಗೆ ಪಡೆದೇ ನಾವು ಹಸ್ತಾಂತರಿಸಿಕೊಂಡಿzವೆ. ಈ ಕಾಮಗಾರಿಗಳು ಸಂಪೂರ್ಣ ಕಳಪೆ ಆಗಿದೆ. ಯಾವುದು ನಮಗೆ ಸಮರ್ಪಕ ಎಂದು ಅನಿಸುವುದಿಲ್ಲ. ಎಸ್ಟಿಮೇಟ್ ಹೇಗಿದೆಯೋ ಆ ಪ್ರಕಾರ ಕಾಮಗಾರಿ ಆಗಲೇ ಇಲ್ಲ. ನೀರಿನ ಮೂಲ ಇಲ್ಲದೆ ಟ್ಯಾಂಕ್ ಮಾಡುತ್ತಾರೆ. ಮತ್ತೆ ಅದಕ್ಕೆ ನೀರು ಎಲ್ಲಿಂದ? ಇದನ್ನು ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ಮಾಡೋದು ಉತ್ತಮ. ನಮ್ಮ ವ್ಯಾಪ್ತಿಯ ಕಾಮಗಾರಿ ಕಳಪೆಯಾಗಿರುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ನಾವು ಲೋಕಾಯುಕ್ತಕ್ಕೆ ಬರೆಯಲು ನಿರ್ಣಯ ಮಾಡಿಕೊಂಡಿzವೆ'' ಎಂದು ಅವರು ಹೇಳಿದರು. ಅವರ ಮಾತಿಗೆ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಕೊಲ್ಲಮೊಗ್ರ ಗ್ರಾ.ಪಂ. ಸದಸ್ಯ ಮಾಧವ ಚಾಂತಾಳ, ಐವರ್ನಾಡು ಗ್ರಾ.ಪಂ. ನ ಬಾಲಕೃಷ್ಣ ಕೀಲಾಡಿ ಮೊದಲಾದವರು ಧ್ವನಿಗೂಡಿಸಿದರು. ಈ ವೇಳೆ ಮಾತನಾಡಿದ ಗುತ್ತಿಗಾರು ಗ್ರಾ.ಪಂ. ಸದಸ್ಯ ವಿಜಯ ಕುಮಾರ್ ಚಾರ್ಮತಕೆಂದ್ರಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದು. ಜೆಜೆಎಂ ಎಂದರೆ ಏನು? ನಮ್ಮ ತಾಲೂಕಿಗೆ ಎಷ್ಟು ಅನುದಾನ ಬಂದಿದೆ. ಎಷ್ಟು ಬೋರ್‌ವೆಲ್ ಕೊರೆದಿದ್ದೀರಿ ? ಎಷ್ಟು ಸಕ್ಸಸ್ ಆಗಿದೆ. ಎಷ್ಟು ಫೈಲ್ ಆಗಿದೆ ಇತ್ಯಾದಿ ವಿರವನ್ನು ಸಭೆಗೆ ನೀಡುವುದು ಕ್ರಮ. ಅದಲ್ಲದೆ ನಾವು ಎಷ್ಟು ಚರ್ಚೆ ಮಾಡಿದರೂ ಸಮಸ್ಯೆ ಇತ್ಯಥ ಆಗದು” ಎಂದು ಹೇಳಿದರು.

ಇದೇ ವಿಷಯದಲ್ಲಿ ಸುದೀರ್ಘ ೧ ಗಂಟೆಗೂ ಹೆಚ್ಚು ಚರ್ಚೆ ನಡೆದು, ಶಾಸಕಿ ಭಾಗೀರಥಿಯವರು, “ಎಲ್ಲ ಗ್ರಾ.ಪಂ. ಅಧ್ಯಕ್ಷರು ಸಮಸ್ಯೆ ಹೇಳುವುದು ನೊಡುವಾಗ ಒಂದೇ ರೀತಿಯ ಸಮಸ್ಯೆ ಎಲ್ಲ ಗ್ರಾ.ಪಂ. ಗಳಲ್ಲಿ ಇದೆ. ಆದ್ದರಿಂದ ಮುಂದಿನ ಒಂದು – ಒಂದೂವರೆ ತಿಂಗಳಲ್ಲಿ ತಾಲೂಕಿನ ಪ್ರತೀ ಗ್ರಾ.ಪಂ. ಗಳಲ್ಲಿ ಸಭೆ ಮಾಡಿ ವರದಿ ನೀಡಬೇಕು. ಈಗ ಸಭೆಯಲ್ಲಿ ಸಮಸ್ಯೆ ಹೇಳಿಕೊಂಡ ಪಂಚಾಯತ್‌ಗಳಿಗೆ ಆದ್ಯತೆಯಲ್ಲಿ ಮೊದಲು ಹೋಗಿ ಸಭೆ ನಡೆಸಿ. ಇಂಜಿನಿಯರ್‌ಗಳು, ಕಾಮಗಾರಿ ನಡೆಸಿದ ಗುತ್ತಿಗೆದಾರರು ಜತೆಯಲ್ಲಿ ಇರಬೇಕು. ಸದಸ್ಯರು ಹೇಳಿದ ಸಮಸ್ಯೆಯನ್ನು ಸೀರಿಯಸ್ ಆಗಿ ಟಿಕ್ ಮಾಡಿಕೊಂಡು, ಪರಿಹಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು” ಎಂದು ಸೂಚನೆ ನೀಡಿದರು.
ತಾಲೂಕು ಪಂಚಾಯತ್‌ನಿಂದ ಅಳವಡಿಸಿದ ಸೋಲಾರ್ ದೀಪದ ಕುರಿತು ಮಹೇಶ್ ಭಟ್ ಕರಿಕ್ಕಳ ಪ್ರಸ್ತಾಪಿಸಿದರೆ, ಕೇಶವ ಅಡ್ತಲೆ ಧ್ವನಿಗೂಡಿಸಿ ಮಾತನಾಡಿದರು.