ಐವರ್ನಾಡು : ” ನನ್ನ ಹಾಡು ನನ್ನದು” ಕರೋಕೆ ಸಂಗೀತ ಸ್ಪರ್ಧೆ ಕಾರ್ಯಕ್ರಮ

0

ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನನ್ನ ಹಾಡು ನನ್ನದು ಕರೋಕೆ ಸಂಗೀತ ಸ್ಪರ್ಧೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು.

ಮಂಗಳೂರು ನಗರದ ಸೌತ್ ಟ್ರಾಫಿಕ್ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯರಾಜ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸರಕಾರಿ ತರಬೇತಿ ಸಂಸ್ಥೆ ಕದ್ರಿ ಮಂಗಳೂರು ಇಲ್ಲಿಯ ಶ್ರೀಮತಿ ಜ್ಯೋತಿ ಲಕ್ಷ್ಮಿ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಸುಳ್ಯದ ತಮಿಳು ಕಲಾವಿದರ ವೇದಿಕೆಯ ಅಧ್ಯಕ್ಷ ಎಸ್ ಕನ್ನದಾಸನ್ ಕುಕ್ಕಂದೂರು ಮುಖ್ಯ ಅತಿಥಿ ಆಗಿದ್ದರು. ಚಿತೇಶ್ ಸಂಗೀತ ಬಳಗದ ಸಂಚಾಲಕ ಪೆರುಮಾಳ್ ಲಕ್ಷ್ಮಣ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಶಕ್ತಿ ಸಂಘ ಐವರ್ನಾಡು ಇದರ ಗೌರವಾಧ್ಯಕ್ಷ ದಿನೇಶ್ ಮಡ್ತಿಲ ರವರು ವಹಿಸಿದ್ದರು. ಸಾಹಿತಿ ಮತ್ತು ಗಾಯಕರಾದ ಎಚ್ ಭೀಮರಾವ್ ವಾಷ್ಠರ್ ರವರು ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು. ಖ್ಯಾತ ಗಾಯಕ ಮತ್ತು ಸಬ್ ಇನ್ಸ್ಪೆಕ್ಟರ್ ಸುಬ್ರಾಯ ಕಲ್ಪನೆ, ಗಾಯಕರಾದ ದೇವದಾಸ್ ಪೊನ್ವಳ್ಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಗಾಯಕಿ ಪುಷ್ಪವತಿ ಎಡಮಂಗಲ ರವರು ಅಭಿನಂದನಾ ಭಾಷಣ ಮಾಡಿದರು. ಗಾಯಕರಾದ ವಿಜಯಕುಮಾರ್ ಮತ್ತು ಗಾಯಕಿ ಪುಷ್ಪಾವತಿ ಎಡಮಂಗಲ ಹಾಗೂ ಬಾಲ ಪ್ರತಿಭೆ ಕು || ಶ್ರೇಯಾ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು. ನನ್ನ ಹಾಡು ನನ್ನದು ಸಂಗೀತ ಸ್ಪರ್ಧೆಯಲ್ಲಿ ಒಟ್ಟು 27 ಜನ ಗಾಯಕರು ಭಾಗವಹಿಸಿದ್ದರು. ಹೆಸರಾಂತ ಗಾಯಕರದ ಶ್ರೀ ಮಿಥುನ್ ರಾಜ್ ವಿದ್ಯಾಪುರ ಮತ್ತು ಪದ್ಮನಾಭ ಚಾರ್ವಾಕ ರವರು ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ಸ್ಪರ್ಧೆಯ ಫಲಿತಾಂಶ

ಹಿರಿಯ ವಿಭಾಗ :- ಪ್ರಥಮ – ಹರಿಪ್ರಸಾದ್ ಸುರತ್ಕಲ್, ದ್ವಿತೀಯ – ಅಖಿಲ ನೆಕ್ರಾಜೆ, ತೃತೀಯ – ಲಾವಣ್ಯ ಉಜಿರೆ ಬಹುಮಾನ ಪಡೆದರು.. ಕಿರಿಯ ವಿಭಾಗದಲ್ಲಿ ಪ್ರಥಮ – ತನ್ಮಯ್ ಸೋಮಯಾಗಿ , ದ್ವಿತೀಯ – ದೃತಿ. ತೃತೀಯ – ಶ್ರೇಯ ರವರು ಬಹುಮಾನ ಪಡೆದರು. ಆಹ್ವಾನಿತ ಹಲವು ಗಾಯಕರಿಂದ ಗಾಯನ ಕಾರ್ಯಕ್ರಮ ಕೂಡ ನಡೆಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇದರ ವಿದ್ಯಾರ್ಥಿನಿಯರಾದ ತನ್ವಿ ಮತ್ತು ದೃತಿ ಪ್ರಾರ್ಥನೆ ಹಾಡಿದರು. ಜ್ಯೋತಿ ಲಕ್ಷ್ಮಿ ಅವರು ವಂದನಾರ್ಪಣೆ ಮಾಡಿದರು. ಐವರ್ನಾಡು ಯುವಶಕ್ತಿ ಸಂಘ ಇದರ ಅಧ್ಯಕ್ಷ ನವೀನ್ ಬಾಂಜಿಕೋಡಿ ಮತ್ತು ರಮೇಶ್ ಮೇದಿನಡ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು.