ಜಯನಗರ : ಮನೆ ಮೇಲೆ ಮರ ಬಿದ್ದು ಹಾನಿ

0

ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ ಸಂಭವಿಸಿದ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ.

ಸುಳ್ಯ ಜಯನಗರ ನಿವಾಸಿ ತಾರಾ ಆರ್. ರೈ ಯವರ ಮನೆ ಮೇಲೆ ಇಂದು ಬೆಳಿಗ್ಗೆ ಮರ ಬಿದ್ದಿದ್ದು, ಮನೆಯ ಮಾಡಿನ ಹಿಂಬದಿಯ ಹಂಚುಗಳು ಪುಡಿಪುಡಿಯಾಗಿವೆ.

ಇತ್ತೀಚೆಗಷ್ಟೆ ಈ ಮನೆಯನ್ನು ದುರಸ್ತಿ ಪಡಿಸಲಾಗಿತ್ತು. ಇದರಿಂದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.