ಅರಂತೋಡು: ಶಿಥಿಲಗೊಂಡಿರುವ ಅರಮನೆಗಯ ಅಡಿಕೆ ಮರದ ತೂಗು ಸೇತುವೆ

0

ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ಅಡಿಕೆ ಮರದ ಸಹಾಯದಿಂದ ನಿರ್ಮಿಸಿದ್ದ ತೂಗುಸೇತುವೆ ಶಿಥಿಲಗೊಂಡಿದ್ದು, ಗ್ರಾಮ ಪಂಚಾಯತಿ ವತಿಯಿಂದ ಸಾರ್ವಜನಿಕರ ಸಂಚಾರ ನಿಷೇಧಿಸಿ ಬ್ಯಾನರ್ ಅಳವಡಿಸಲಾಗಿದೆ.

ಅರಂತೋಡಿನಿಂದ ಅರಮನೆಗಯ ಮೂಲಕ ಬಳ್ಳಕ ಮಿತ್ತಡ್ಕ ಮೂಲಕ ಮರ್ಕಂಜ ಗ್ರಾಮವನ್ನು ಸಂಪರ್ಕಿಸುವ ಇಲ್ಲಿ ಶಾಶ್ವತ ಸೇತುವೆ ನಿರ್ಮಾಣ ಆಗಬೇಕಾಗಿದ್ದು, ಈ ಬಗ್ಗೆ ಕಳೆದ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ.