ನಾರ್ಣಕಜೆ : ಫೋಕ್ಸೊ ಕಾಯ್ದೆಯ ಬಗ್ಗೆ ಅರಿವು ಕಾರ್ಯಕ್ರಮ

0

ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪೆರುವಾಜೆ ಮತ್ತು ಗ್ರಾಮ ಪಂಚಾಯತ್ ನೆಲ್ಲೂರು ಕೆಮ್ರಾಜೆ ಇದರ ಜಂಟಿ ಆಶ್ರಯದಲ್ಲಿ ” ಪೋಕ್ಸೋ ” ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮ ಸ. ಹಿ. ಪ್ರಾ. ಶಾಲೆ ನಾರ್ಣಕಜೆ ಯಲ್ಲಿ ನಡೆಯಿತು.


ಸಭಾ ಅಧ್ಯಕ್ಷತೆಯನ್ನು ನಾರ್ಣಕಜೆ ಶಾಲಾ ಮುಖ್ಯಾಪಾಧ್ಯಾಯಿನಿ ಶ್ರೀ ಮತಿ ಪೂರ್ಣಿಮಾ ಎಂ.ಆರ್. ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್ ಕೆ. ನೆರವೇರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮತಿ ಪ್ರಪುಲ್ಲಾ ಗ್ರಂಥಾಲಯ ಮೇಲ್ವಿಚಾರಕಿ ದೇವಚಳ್ಳ ಉಪಸ್ಥಿತರಿದ್ದರು.

ಮುಖ್ಯ ಅಥಿತಿಗಳಾಗಿ ಧನಪತಿ ಬಿ .ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ನೆಲ್ಲೂರು ಕೆಮ್ರಾಜೆ, ಶ್ರೀಮತಿ ವಂದನಾ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ನೆಲ್ಲೂರು ಕೆಮ್ರಾಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸೆಶ್ಮಿ ವ್ಯೆ. ಪಿ, ಉಪಿತಾ ಡಿ, ಕಾವ್ಯ ಶ್ರೀ ಸಮಾಜ ಕಾರ್ಯ ವಿಭಾಗ ಡಾ. ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪೆರುವಾಜೆ ಇವರು ನಡೆಸಿಕೊಟ್ಟರು.