ಅಡಿಕೆ ಎಲೆ‌ ಹಳದಿ ರೋಗ ಸಂಶೋಧನೆಗೆ ಒತ್ತು : ತಾತ್ಕಾಲಿಕ ಪರಿಹಾರ‌ ನೀಡಲು ಕ್ರಮ

0

ಸುಳ್ಯದಲ್ಲಿ ಸಚಿವ ದಿನೇಶ್ ಗುಂಡೂರಾವ್

“ಅಡಿಕೆ ಎಲೆ ಹಳದಿ ರೋಗದ ಕುರಿತು ಶಾಶ್ಚತವಾದ ಪರಿಹಾರ ಹುಡುಕುವುದು ಮುಖ್ಯ ವಾಗಿದ್ದು, ಅದಕ್ಕೆ ಅಗತ್ಯ ಸಂಶೋಧನೆ ಆಗಬೇಕಾಗಿದೆ. ಆ ಸಂಶೋಧನೆಗೆ ಹಣದ ನೆರವು ಬೇಕಾಗಿದ್ದು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತೇವೆ. ಈಗ ತಾತ್ಕಾಲಿಕವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ” ಎಂದು ಆರೋಗ್ಯ ಸಚಿವ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುಳ್ಯದಲ್ಲಿ ಟಿ.ಎಂ.ಶಹೀದ್ ತೆಕ್ಕಿಲ್ ಅಭಿನಂದನಾ ‌ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಅಡಿಕೆ ಎಲೆ ಹಳದಿ ರೋಗದ ಕುರಿತು ಮಾತನಾಡಿದರು.

“ಮಂಗಳೂರಿನಲ್ಲಿ ನಡೆದ‌ ಕೆಡಿಪಿ ಸಭೆಯಲ್ಲಿ ಅಡಿಕೆ ಎಲೆ ಹಳದಿ ರೋಗದ ಕುರಿತು ಚರ್ಚೆ ಮಾಡಿದ್ದೇವೆ” ಎಂದು ಸಚಿವರು ಹೇಳಿದರು.

“ಅರಂತೋಡು ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಕುರಿತು ಶಹೀದ್ ರವರು ಪ್ರಸ್ತಾಪಿಸಿದ್ದು, ಸಿಬ್ಬಂದಿಗಳ ನೇಮಕ ಮಾಡುತ್ತೇವೆ” ಎಂದು ಸಚಿವರು ಹೇಳಿದರು.