ಬೆಳ್ಳಾರೆ ಲಯನ್ಸ್ ಕ್ಲಬ್‌ಗೆ 5 ವರ್ಷದೊಳಗಿನ ಸಾಧಕ ಕ್ಲಬ್‌ಗಳಲ್ಲಿ ಜಿಲ್ಲೆಯಲ್ಲಿ 7ನೇ ಸ್ಥಾನ

0

23/24 ನೇ ಹೊಸ ಕ್ಲಬ್ ಗಳ ಸಾಲಿನಲ್ಲಿ 5 ವರ್ಷದೊಳಗಿನ ಕ್ಲಬ್‌ಗಳಲ್ಲಿ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಏಳನೇ ಸ್ಥಾನವನ್ನು ಪಡೆದು ಮುಲ್ಕಿ ಸುಂದರಾಮ್ ಶೆಟ್ಟಿ ಕನ್ವೆಂನ್ಷನ್ ನಲ್ಲಿ ಜು. 6ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ ಸೋಜಾರವರಿಂದ ಹಲವಾರು ಪ್ರಶಸ್ತಿಗಳನ್ನು ಪಡೆದರು. ಪ್ರಶಸ್ತಿಯನ್ನು ಪ್ರಾಂತಿಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷ ವಿಠ್ಠಲ್ ಶೆಟ್ಟಿ ಪೆರುವಾಜೆ, ಭವಾನಿ ವಿ. ಶೆಟ್ಟಿ, ಕಾರ್ಯದರ್ಶಿ ದಯಾನಂದ ನಾಯ್ಕ್ ಮಠತಡ್ಕ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪೆರ್ವಾಜೆ, ನೂತನ ಅಧ್ಯಕ್ಷೆ ಉಷಾ ಬಿ ಭಟ್, ಉಪಾಧ್ಯಕ್ಷರಾದ ಚಂದ್ರಹಾಸ ರೈ ಪುಡ್ಕಜೆ, ಲಯನ್ ಆಶಾ ಸಿ ರೈ, ಲಯನ್ ದಯಾಕರ ಆಳ್ವ, ಲಯನ್ ಯತೀಶ್ ಭಂಡಾರಿ, ಲಯನ್ ಗಣೇಶ್ ರೈ, ಲಯನ್ ಮನೋಹರ್ ಪಿ ಎಂ, ಲಯನ್ ರಕ್ಷಿತ್ ಪೆರುವಾಜೆ ಉಪಸ್ಥಿತರಿದ್ದರು. ಎಂ.ಜೆ.ಎಫ್ ದೇಣಿಗೆ ನೀಡಿದ ಲಯನ್ ಎಸ್.ಬಿ ಜಯರಾಮ ರೈ ಅವರಿಗೆ ಪ್ರಮಾಣಪತ್ರವನ್ನು ಈ ಪಡೆದರು.