ಕೊಲ್ಲಮೊಗ್ರು ಕೆ ವಿ ಜಿ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ರಚನೆ

0

ಕೆ ವಿ ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು
2024-25 ನೇ ವಿದ್ಯಾರ್ಥಿ ಸರಕಾರ, ಚುನಾವಣೆಯ ಮೂಲಕ ನಡೆಯಿತು. ವಿದ್ಯಾರ್ಥಿ ನಾಯಕನಾಗಿ ಕವನ್, ಉಪನಾಯಕನಾಗಿ ಶಾಶ್ವತ್ ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ಚಂದನ್ ಸ್ವಚ್ಚತಾ ಮತ್ತು ಆರೋಗ್ಯಮಂತ್ರಿಯಾಗಿ ಸತೀಶ, ತೋಟಗಾರಿಕಾ ಮತ್ತು ನೀರಾವರಿ ಮಂತ್ರಿಯಾಗಿ ಹಿತೇಶ್ , ಸಾಂಸ್ಕ್ರತಿಕ ಮಂತ್ರಿಯಾಗಿ ಪ್ರವೀಣ ಕುಮಾರ ಆಯ್ಕೆಯಾದರು. ಕಾರ್ಯದರ್ಶಿ ವರುಣ್ ಎ.ಪಿ, ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ಪ್ರಫುಲ್ಲ, ಉಪ ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ಶ್ರೀಲಕ್ಷ್ಮೀ ಆಯ್ಕೆಗೊಂಡರು. ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಪಿ ಕೆ ಉಸ್ತುವಾರಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಬಾಲಕೃಷ್ಣ ಗೌಡ ಇವರು ಚುನಾವಣಾಧಿಕಾರಿಯಾಗಿ, ಅಧ್ಯಾಪಕ ವೃಂದದವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.