ಪಂಜಿಕಲ್ಲಿನ ಶಾಲಾ ಜಗಲಿಯಲ್ಲಿ ನವಜಾತ ಶಿಶುವನ್ನು ಬಿಟ್ಟು ಪೋಷಕರು ಪರಾರಿ

0

ಸದ್ಯ ಆದೂರು ಪೊಲೀಸ್ ಠಾಣೆಯಲ್ಲಿರುವ ಮಗು

ಶಾಲಾ ಜಗಲಿಯಲ್ಲಿ ನವಜಾತ ಶಿಶುವನ್ನು ಬಿಟ್ಟು ಪೋಷಕರು ಪರಾರಿಯಾಗಿರುವ ಘಟನೆ ಜಾಲ್ಸೂರು ಸಮೀಪದ ಪಂಜಿಕಲ್ಲಿನಿಂದ ವರದಿಯಾಗಿದೆ.

ಇಂದು ಬೆಳಿಗ್ಗೆ ಶಾಲೆಯವರು ಬಂದು ನೋಡಿದಾಗ ಜಗಲಿಯಲ್ಲಿ ನವಜಾತ ಶಿಶು ಕಂಡುಬಂದಿದ್ದು ಅವರು ಆದೂರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮಗುವನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ.