ವಿದ್ಯುತ್ ಸಮಸ್ಯೆ : ಟಿ.ಎಂ. ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ಪ್ರತಿಭಟನೆ

0


ಸುಳ್ಯದಲ್ಲಿ ವಿದ್ಯುತ್ ಸಮಸ್ಯೆಯಿಂದ ಜನರು ಕಂಗಲಾಗಿದ್ದಾರೆ ಸುಳ್ಯ ಜನತೆ ಕತ್ತಲೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಇಂದು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟಿಸಿ ಮನವಿ ಸಲ್ಲಿಸಿದರು.


ಸುಳ್ಯ ತಾಲೂಕಿನಾಧ್ಯಂತ ವಿದ್ಯುತ್ ಸಮಸ್ಯೆಗಳನ್ನು ಮನಗಂಡು ಇಂದು ಸಂಪಾಜೆ ಗ್ರಾಮದ ಮೊದಲ ಪ್ರಜೆ ಸುಮತಿ ಶಕ್ತಿವೇಲು ರವರು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆಯಲ್ಲಿ ಮುಖ್ಯವಾಗಿ ಅಜ್ಜಾವರ , ಸಂಪಾಜೆ , ಅರಂತೋಡು , ಮರ್ಕಂಜ , ಮಂಡೆಕೋಲು ಸೇರಿದಂತೆ ಇತರ ಇತರೆ ಗ್ರಾಮಗಳ ಸಮಸ್ಯೆಗಳನ್ನು ತೋರಿಸಿ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಸೋಮಾರಿ ಅಧಿಕಾರಿಗಳಿಗೆ ದಿಕ್ಕಾರ ಕೂಗಲಾಯಿತು.
ಈ ಸಂದರ್ಭದಲ್ಲಿ ಗ್ಯಾರಂಟಿ ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ , ನಗರ ಪಂಚಾಯತ್ ಸದಸ್ಯರಾದ ಸಿದ್ದೀಕ್ ಕೊಕ್ಕೊ , ಶರೀಫ್ ಕಂಠಿ , ಜಿ ಕೆ ಹಮೀದ್ , ಅಬ್ದುಲ್ಲ ಹನೀಫ್ ಮೊಟ್ಟಂಗಾರು , ಗ್ರಾ.ಪಂ ಉಪಾಧ್ಯಕ್ಷ ಎಸ್ ಕೆ ಹನೀಫ್ ,ಸಲೀಂ ಪೆರಂಗೋಡಿ ಉಪಸ್ಥಿತರಿದ್ದರು.
ಪ್ರತಿಭಟನೆ ಸ್ಥಳಕ್ಕೆ ಬಂದ ಅಧಿಕಾರಿಗಳು ಕೂಡಲೇ ಸುಳ್ಯದಲ್ಲಿ ಆಗುತ್ತಿರುವ ವಿಧ್ಯುತ್ ಸಮಸ್ಯೆಗಳನ್ನು ಅತ್ಯಂತ ಶ್ರೀಘ್ರ ಪರಿಹಾರ ನೀಡುವ ಭರವಸೆಯನ್ನು ನೀಡಿದರು. ಕಛೇರಿ ಮುಂಭಾಗದಲ್ಲಿ ನೀರು ನಿಲ್ಲುತ್ತಿದ್ದು ಇದನ್ನು ಕೂಡ ತೆರವುಗೊಳಿಸಿ ಜನರಿಗೆ ನಡೆದಾಡಲು ಸಹಾಕರವಾಗುವಂತೆ ಮಾಡುತ್ತೇವೆ ಎಂದು ಪ್ರತಿಭಟನಾ ನಿರತರಿಗೆ ತಿಳಿಸಿದರು.