ಸುಳ್ಯ ನ. ಪಂ ವತಿಯಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

0

ಮಾಹಿತಿ ನೀಡಲು ಜು 31 ಕೊನೆ ದಿನ ಸರಕಾರದ ಸೂಚನೆ

ರಾಜ್ಯ ಸರಕಾರದ ಸೂಚನೆ ಮೇರೆಗೆ ಶಾಲೆಯಿಂದ ಹೊರ ಉಳಿದ ವಿದ್ಯಾರ್ಥಿಗಳ ಮತ್ತು ಶಾಲೆ ಶಿಕ್ಷಣ ಪಡೆದುಕೊಳ್ಳುವ 6 ವರ್ಷ ದಿಂದ 18 ವರ್ಷದ ಮಕ್ಕಳ ಮಾಹಿತಿ ಸಂಗ್ರಹಣೆ ಸುಳ್ಯ ನಗರ ಪಂಚಾಯತ್ ಕಚೇರಿ ವತಿಯಿಂದ ಸುಳ್ಯದಲ್ಲಿ ನಡೆಯುತ್ತಿದೆ.


ಮಾಹಿತಿಯಲ್ಲಿ ಶೈಕ್ಷಣಿಕ ವಿವರಗಳನ್ನು ನೀಡುವುದರ ಜೊತೆಗೆ ಮಕ್ಕಳ ಭಾವಚಿತ್ರ, ಅದಾರ್ ಸಂಖ್ಯೆ, ಕುಟುಂಬದ ಪಡಿತರ ಚೀಟಿಯ ಸಂಖ್ಯೆ ನೀಡಬೇಕಾಗುತ್ತದೆ.
2024-25ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮನೆ-ಮನೆ ಸಮೀಕ್ಷೆಯನ್ನು ನಡೆಸಲು ಕರ್ನಾಟಕ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಂದ ಈ ಸುತ್ತೋಲೆ ಹೊರಡಿಸಲಾಗಿದೆ.
ಈ ನಿಟ್ಟಿನಲ್ಲಿ ಸುಳ್ಯ ನಗರ ಪಂಚಾಯತ್ ವತಿಯಿಂದ ನಗರದ 20 ವಾಡ್೯ಗಳಲ್ಲಿಯೂ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸುತ್ತಿದ್ದಾರೆ.