ಕೊಡಗು ಸಂಪಾಜೆ: ಭಾರೀ ಪ್ರಮಾಣದಲ್ಲಿ ಬರೆ ಕುಸಿತ

0

ಮಂಗಳಪಾರೆ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ

ಕೊಡಗು ಸಂಪಾಜೆ ಗ್ರಾಮದ ಚೆಡಾವು ಜಗದೀಶ್ ಕೆದಂಬಾಡಿ ಅವರ ಮನೆಯ ಸಮೀಪ ಭಾರೀ ಪ್ರಮಾಣದಲ್ಲಿ ಬರೆ ಕುಸಿತವಾಗಿರುವ ಘಟನೆ ಜು.19ರಂದು ರಾತ್ರಿ ಸಂಭವಿಸಿದೆ.

ಜಗದೀಶ್ ಕೆದಂಬಾಡಿ ಅವರ ಮನೆಯ ಸಮೀಪಲ್ಲಿ ಬರೆ ಜರಿತವಾಗಿದ್ದು, ಇನ್ನಷ್ಟು ಬರೆ ಜರಿತ ಸಂಭವಿಸಿದೆ ಮಂಗಳಪಾರೆ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಮಂಗಳಪಾರೆ ಭಾಗದಲ್ಲಿ ಸುಮಾರು ಮೂವತ್ತಕ್ಕೂ ಅಧಿಕ ಮನೆಗಳಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.