ಮೆಸ್ಕಾಂ ಗುತ್ತಿಗೆದಾರರಿಗೆ ಭತ್ಯೆ ಕಡಿತಗೊಳಿಸಿದ ಪರಿಣಾಮಬ್ರೇಕ್ ಡೌನ್ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರ ನಿರ್ಧಾರ

0

ಸುಳ್ಯದಲ್ಲಿ ಪತ್ರಿಕಾಗೋಷ್ಠಿ

ಬ್ರೇಕ್ ಡೌನ್ ಕಾಮಗಾರಿಗಳಿಗೆ ಈ ಹಿಮದೆ ನೀಡುತ್ತಿದ್ದ ಭತ್ಯೆಯನ್ನು ಕಡಿತ ಮಾಡಿರುವುದರಿಂದ ಕೆಲಸ ನಿರ್ವಹಿಸಲು ಕಷ್ಟ ಸಾಧ್ಯವಾಗುತ್ತಿದೆ. ಆದ್ದರಿಂದ ಸರಕಾರ ಈ ಹಿಂದೆ ಇದ್ದಂತೆ ಭತ್ಯೆಯನ್ನು ನೀಡಬೇಕು. ಇಲ್ಲವಾದಲ್ಲಿ ಸೋಮವಾರದಿಂದ ಬ್ರೇಕ್ ಡೌನ್ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸಲಾಗುವುದು ಎಂದು ಕಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸುಲ್ಯ ತಾಲೂಕು ಪದಾಧಿಕಾರಿಗಳು ತಿಳಿಸಿದ್ದಾರೆ.


ಜು.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಸೋಮಶೇಖರ ಪೈಕ ಹಾಗೂ ಜಿಲ್ಲಾ ಸಂಘದ ನಿರ್ದೇಶಕ ಮಾಯಿಲಪ್ಪ ಸಂಕೇಶರು ಮಾತನಾಡಿ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಾದ ನಾವು ಮೆಸ್ಕಾಂ ಜೊತೆಗೂಡಿ ಹಲವು ವರ್ಷಗಳಿಂದ ತುರ್ತು ಕಾಮಗಾರಿಗಳಲ್ಲಿ ಒಂದಾದ ಬ್ರೇಕ್ ಡೌನ್ ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅತೀ ಶೀಘ್ರದಲ್ಲಿ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಸ್ಕಾಂ ನೀಡುತ್ತಿದ್ದ ಬ್ರೇಕ್ ಡೌನ್ ಕಾಮಗಾರಿ ದರದಲ್ಲಿ ಬಾರಿ ಇಳಿಕೆಯಾಗಿದ್ದು, ಹಾಗೂ ಈ ಹಿಂದೆ ಬ್ರೇಕ್ ಡೌನ್ ಕಾಮಗಾರಿಗಳ ಪ್ರಾದೇಶಿಕ ಭತ್ಯೆ ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್ ಡೌನ್ ಭತ್ಯೆಗಳನ್ನು ರದ್ದುಗೊಳಿಸಿ, ಕೇವಲ ೧೨% ಭತ್ಯೆಯನ್ನು ನೀಡುತ್ತಿದ್ದು, ಇದರಿಂದ ವಿದ್ಯುತ್ ಗುತ್ತಿಗೆದಾರರು ಭಾರಿ ನಷ್ಟ ಅನುಭವಿಸುತ್ತಿzವೆ. ಈ ಹಿಂದೆಯು ಇದರ ಬಗ್ಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದು, ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಅದುದ್ದರಿಂದ ವಿದ್ಯುತ್ ಗುತ್ತಿಗೆದಾರರಾದ ನಾವು ಬ್ರೇಕ್ ಡೌನ್ ಕೆಲಸಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿರುತ್ತೇವೆ. ಇದರಿಂದಾಗುವ ಸಾರ್ವಜನಿಕ ತೊಂದರೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ಎಂದು ಹೇಳಿದ ಅವರು, ಬ್ರೇಕ್ ಡೌನ್ ಕಾಮಗಾರಿಗಳಲ್ಲಿ ಈ ಹಿಂದಿನಂತೆಯೇ ಪ್ರಾದೇಶಿಕ ಭತ್ಯೆ, ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್ ಡೌನ್ ಭತ್ಯೆಗಳನ್ನು ನೀಡಿದ್ದಲ್ಲಿ ಮಾತ್ರ ಕೆಲಸಗಳನ್ನು ಮುಂದುವರಿಸಲು ನಾವು ಬದ್ಧರಾಗಿರುತ್ತೇವೆ ಎಂದವರು ವಿವರ ನೀಡಿದರು.


ಸಂಘದ ಜತೆ ಕಾರ್ಯದರ್ಶಿ ಸತ್ಯನಾರಾಯಣ ಹಾಗೂ ಕೋಶಾಧಿಕಾರಿ ಮಧುಕಿರಣ್ ಕೆ.ಎನ್. ಮಾತನಾಡಿ, “ಹಿಂದೆ ಶೇ.೪೫ ರಷ್ಟು ಭತ್ಯೆ ಕೊಡುತ್ತಿದ್ದರು. ಅದನ್ನು ಶೇ.೧೨ಕ್ಕೆ ಇಳಿಸಿರುವುದರಿಂದ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಮೂರು ತಿಂಗಳ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿzವೆ. ಗ್ರಾಹಕರಿಗೆ ಸಮಸ್ಯೆ ಆಗಬಾರದೆಂಬ ನಿಟ್ಟಿನಲ್ಲಿ ಇಲ್ಲಿಯವರೆಗೆ ಕೆಲಸ ನಿರ್ವಹಿಸಿzವೆ. ಸೋಮವಾರದಿಂದ ನಾವು ಕೆಲಸ ಸ್ಥಗಿತಗೊಳಿಸುವುದಾಗಿ ಅವರು ಹೇಳಿದರು.
ಮಳೆನಾಡು ಭಾಗದಲ್ಲಿ ಸಮತಟ್ಟು ಪ್ರದೇಶ ಆಗಿದ್ದು ಅಲ್ಲಿಯ ನಿಮಯವನ್ನು ಇಲ್ಲಿಯೂ ಜಾರಿಗೊಳಿಸಿದರೆ ಹೇಗೆ? ಇಲ್ಲಿ ಗುಡ್ಡಕಾಡು ಪ್ರದೇಶ. ಒಂದು ವಿದ್ಯುತ್ ಕಂಬ ತುಂಡಾದರೆ, ಎತ್ತರದ ಪ್ರದೇಶದ ಮೇಲೆ ಕೊಂಡು ಹೋಗಿ ಸರಿ ಪಡಿಸಲು ತುಂಬಾ ಖರ್ಚು ತಗಲುತ್ತದೆ. ಕೆಲಸಗಾರನಿಗೆ ಸಂಬಳದ ಜತೆಗೆ, ಭದ್ರೆತಯೂ ನಾವೇ ಕೊಡಬೇಕಾಗಿರುವುದರಿಂದ ಎಲ್ಲ ಹೊಣೆ ನಮ್ಮ ಮೇಲೆಯೇ ಇರುತ್ತದೆ” ಎಂದು ಗುತ್ತಿಗೆದಾರರು ವಿವರ ನೀಡಿದರು.
ಹಿರಿಯ ಗುತ್ತಿಗೆದಾರರಾದ ಶ್ರೀಧರ ಕೆ.ಎಸ್. ಮಾತನಾಡಿ, ಗುತ್ತಿಗೆದಾರರ ಮನವಿಗೆ ಸಂಬಂಧಪಟ್ಟವರು ಶೀಘ್ರವಾಗಿ ಸ್ಪಂದನೆ ನೀಡಬೇಕು” ಎಂದವರು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರರಾದ ರಾಮ ಜೋಯಿಷ ಬೆಳ್ಳಾರೆ, ಧನಂಜಯ ಬಳ್ಪ, ಹರೀಶ್ಚಂದ್ರ ಕೆ, ಚಿದಾನಂದ ಎಂ. ಇದ್ದರು.