ಸೋಮಶೇಖರ ಕೊಯಿಂಗಾಜೆ ನೇತೃತ್ವದಲ್ಲಿ ಸಹಕಾರಿ ಅಭಿವೃದ್ಧಿ ರಂಗದ ಕಾರ್ಯಕರ್ತರ ಸಭೆ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಡಿ.23ರಂದು ಚುನಾವಣೆ ನಡೆಯಲಿದ್ದು, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ನೇತೃತ್ವದಲ್ಲಿ ಸಹಕಾರಿ ಅಭಿವೃದ್ಧಿ ರಂಗದ ಕಾರ್ಯಕರ್ತರ ಸಭೆಯು ಸಂಪಾಜೆಯಲ್ಲಿ ಡಿ.14ರಂದು ನಡೆಯಿತು. ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಸಂಪಾಜೆ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಅವರು ಸಹಕಾರಿ ಸಂಘದ ಚುನಾವಣೆ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಶ್ರೀಮತಿ ಯಮುನ ಬಿ.ಎಸ್., ಶ್ರೀಮತಿ ಉಷಾ ರಾಮನಾಯ್ಕ, ಕೆ.ಪಿ. ಜಾನಿ ಕಲ್ಲುಗುಂಡಿ, ಶ್ರೀಮತಿ ಸುಶೀಲಾ ಬಾಲಕೃಷ್ಣ, ಪ್ರಮೀಳ ಪೆಲ್ತಡ್ಕ, ಜ್ಞಾನಶೀಲನ್ (ರಾಜು), ಸಂಜೀವ ಪೂಜಾರಿ, ಸಿಲ್ವೆಸ್ಟರ್ ಡಿಸೋಜ, ಶೌವಾದ್ ಗೂನಡ್ಕ, ಬೆಂಜಮಿನ್ ಡಿಸೋಜ, ಜಾಕಬ್ ಡಿಸೋಜ, ಲಿಸ್ಸಿ ಮೊನಾಲಿಸಾ, ವಸಂತ ಗೌಡ ಪೆಲ್ತಡ್ಕ, ಪಿ.ಎ. ಉಮ್ಮರ್, ಕಾಂತಿ ಬಿ.ಎಸ್., ಹಮೀದ್ ಹೆಚ್., ಲಲನ, ರಹೀಂ ಬೀಜದಕಟ್ಟೆ, ಅಬ್ದುಲ್ ಖಾದರ್, ಎ.ಕೆ. ಇಬ್ರಾಹಿಂ, ತಾಜ್ ಮಹಮ್ಮದ್ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.