ಬೆಳ್ಳಾರೆ ಲಯನ್ಸ್ ಕ್ಲಬ್ ವತಿಯಿಂದ ಗೋ-ಗ್ರೀನ್ ಕಾರ್ಯಕ್ರಮ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ವತಿಯಿಂದ ಲಯನ್ಸ್ ಸದಸ್ಯ ಹೊನ್ನಪ್ಪ ಬೆಳ್ಳಾರೆಯವರ ಕೃಷಿ ಜಾಗದಲ್ಲಿ ಗಿಡ ನೆಡುವ ಮೂಲಕ ಗೋ-ಗ್ರೀನ್ ಕಾರ್ಯಕ್ರಮ ನಡೆಸಲಾಯಿತು.

ಕ್ಲಬ್‌ನ ಅಧ್ಯಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ವಿಠಲ್ ಶೆಟ್ಟಿ ಪೆರುವಾಜೆ, ಕೋಶಾಧಿಕಾರಿ ಈಶ್ವರ ವಾರಣಾಶಿ, ನಿಕಟಪೂರ್ವ ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ಹೊನ್ನಪ್ಪ ಬೆಳ್ಳಾರೆ, ಭವಾನಿ ವಿ. ಶೆಟ್ಟಿ, ಗಣೇಶ್ ರೈ, ರಕ್ಷಿತ್ ಪೆರುವಾಜೆ ಮತ್ತು ಸ್ನೇಹ ಇಲೆಕ್ಟ್ರಿಕಲ್ಸ್ ಸಿಬ್ಬಂದಿ ಮೂಸಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಥಳೀಯರಾದ ಶೀನಪ್ಪ ಮತ್ತಿತರರು ಗಿಡಗಳನ್ನು ನೆಡಲು ಸಹಕರಿಸಿದರು.